ಮೂಲಸೌಕರ್ಯಿ ಸೃಷ್ಟಿಗಾಗಿ ನೀಡಲಾಗಿರುವ ಬಾಹ್ಯ ವಾಣಿಜ್ಯ ಸಾಲ ನಿಯಮಾವಳಿಯನ್ನು ಉದಾರೀಕರಣಗೊಳಿಸಿದ ಆರ್‌ಬಿಐ

ದೇಶದಲ್ಲಿ ಮೂಲ ಸೌಕರ್ಯ ಸೃಷ್ಟಿಗಾಗಿ ನೀಡಲಾಗುವ ಬಾಹ್ಯ ವಾಣಿಜ್ಯ ಸಾಲಗಳ ನಿಯಮಾವಳಿಗಳನ್ನು ಆರ್‌ಬಿಐ ಉದಾರೀಕರಿಸಿದೆ. ಕೇಂದ್ರ ಸರ್ಕಾರದ ಜತೆ ನಡೆಸಿದ ಸಮಾಲೋಚನೆ ನಂತರ, ಆರ್‌ಬಿಐ ಪರಿಷ್ಕೃತ ನಿಯಮಾವಳಿಗಳನ್ನು ಪ್ರಕಟಿಸಿದೆ. ಬಾಹ್ಯ ವಾಣಿಜ್ಯ ಸಾಲಗಳ ಸರಾಸರಿ ಕಳೆದ ೫ ವರ್ಷಗಳ ಅವಧಿಯಲ್ಲಿ ೩ ವರ್ಷಗಳಿಂದ ಸತತವಾಗಿ ಇಳಿಕೆ ಕಂಡು ಬಂದಿದೆ.ಬ್ಯಾಂಕಿಂಗ್‌ಯೇತರ ಸಾಲ ಪ್ರಮಾಣದಲ್ಲಿ ಏರಿಳಿಕೆಯಿಂದಾಗಿ ಕಳೆದ ೧೦ ವರ್ಷಗಳಲ್ಲಿ ಬಾಹ್ಯಾ ವಾಣಿಜ್ಯ ಸಾಲದ ಗುರಿ ಕಡಿಮೆಯಾಗಿದೆ. ದೀರ್ಘಕಾಲದ ಆಸ್ತಿ ಹಾಗೂ ಲಘು ಸಾಲ ಏರಿಕೆಯಿಂದಾಗಿ ಮೂಲ ಸೌಕರ್ಯ ಸೃಷ್ಟಿ ಕಡಿಮೆಯಾಗಿದೆ. ಎಂದು ಆರ್‌ಬಿಐ ಉಲ್ಲೇಖಿಸಿದೆ.