ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಯತ್ನಗಳಿಗೆ ಎಲ್ಲ ನೆರವು – ಭಾರತ ಪುನರುಚ್ಚಾರ

ಅಫ್ಘಾನಿಸ್ತಾನದಲ್ಲಿ ಭದ್ರತೆ, ಸುಸ್ಥಿರತೆ, ಏಕತೆ ಮತ್ತು ಸಮೃದ್ಧತೆ ತರಲು ಹಾಗೂ ಆ ರಾಷ್ಟ್ರದಲ್ಲಿ ಶಾಂತಿ ಸ್ಥಾಪನೆಯ ಯತ್ನಗಳಿಗೆ ಎಲ್ಲ ನೆರವು ನೀಡುವುದಾಗಿ ಭಾರತ ಪುನರುಚ್ಚರಿಸಿದೆ. ಅಫ್ಘಾನಿಸ್ತಾನ ಕುರಿತು ಮಾಸ್ಕೋದಲ್ಲಿಂದು  ರಷ್ಯಾ ಒಕ್ಕೂಟ ಸಭೆ ಏರ್ಪಡಿಸಿರುವುದು ಭಾರತದ ಗಮನದಲ್ಲಿದೆ. ಆದರೆ,  ಆಫ್ಘನ್‌ನಲ್ಲಿ ಶಾಂತಿ ಸ್ಥಾಪನೆ  ಕುರಿತ  ಯಾವುದೇ ಪ್ರಯತ್ನಗಳು ಆಫ್ಘನ್ ಮುಂದಾಳತ್ವದಲ್ಲಿ, ಆಫ್ಘನ್ ನಿಯಂತ್ರಣದಲ್ಲಿ ಹಾಗೂ ಆಫ್ಘನ್ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯಬೇಕೆಂಬುದು  ಭಾರತದ ನಿಲುವು ಎಂದು ವಿದೇಶಾಂಗ  ವಕ್ತಾರರು ದೆಹಲಿಯಲ್ಲಿ ತಿಳಿಸಿದ್ದಾರೆ. ಮಾಸ್ಕೋ ಸಭೆಯಲ್ಲಿಂದು ಭಾರತ ಅಧಿಕಾರೇತರ ಮಟ್ಟದಲ್ಲಿ  ಭಾಗವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.