ಚೈನಾ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ; ಸಿಂಗಲ್ಸ್ ವಿಭಾಗಗಳಲ್ಲಿ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ಸ್ ಪ್ರವೇಶ

ಫುಜೌನಲ್ಲಿ ನಡೆಯುತ್ತಿರುವ ಚೈನಾ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗಗಳಲ್ಲಿ ಪಿ.ವಿ. ಸಿಂಧು ಮತ್ತು  ಕಿಡಂಬಿ ಶ್ರೀಕಾಂತ್ ೮ರ ಘಟ್ಟ ತಲುಪಿದ್ದಾರೆ.  ಪುರುಷರ ಡಬಲ್ಸ್ ವಿಭಾಗದಲ್ಲಿ  ಸಾತ್ವಿಕ್ ಸಾಯಿರಾಜ್ ರಿಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.  ನಿನ್ನೆ ನಡೆದ ಪಂದ್ಯದಲ್ಲಿ ಈ ಜೋಡಿ, ಇಂಡೋನೇಷ್ಯಾದ ಡಬೂ. ಎನ್. ಆರ್ಯ ಪಾಂಗ್ ಕಾರ್ಯನಿರಾ  ಮತ್ತು ಆದಿ ಯೂಸಫ್ ಸಂತಾಷೋ  ಜೋಡಿ ವಿರುದ್ಧ  ೧೬-೨೧, ೨೧-೧೪ ಮತ್ತು ೨೧-೧೫ ಅಂತರದಲ್ಲಿ ಗೆದ್ದು, ೮ರ ಘಟ್ಟ ತಲುಪಿತು.  ಈ ಹಂತದಲ್ಲಿ ರಿಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷ್ಯಾದ ಮೊಹಮ್ಮದ್ ಯಾಹಸನ್ ಮತ್ತು ಹೆಂದ್ರ ಸೆತಿವಾನ್ ಜೋಡಿ ವಿರುದ್ಧ  ಸೆಣಸಲಿದೆ.