ಬಾಂಗ್ಲಾದೇಶದಲ್ಲಿ ಮುಂದಿನ ತಿಂಗಳ ೨೩ರಂದು ಸಂಸದೀಯ ಚುನಾವಣೆ

ಮುಂದಿನ ತಿಂಗಳ  ೨೩ರಂದು  ಬಾಂಗ್ಲಾದೇಶದಲ್ಲಿ ಸಂಸದೀಯ ಚುನಾವಣೆ ನಡೆಯಲಿದೆ.  ಬಾಂಗ್ಲಾದೇಶದಲ್ಲಿ ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಪರಿಸ್ಥಿತಿ ಪೂರಕವಾಗಿದೆ ಎಂದು ಅಲ್ಲಿನ ಮುಖ್ಯ ಚುನಾವಣಾ ಆಯುಕ್ತ  ಕೆ.ಎಂ. ನೂರ್‌ವುಲ್ ಹೂಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದ್ದು,  ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ.  ಈ ತಿಂಗಳ ೧೯ರಂದು  ನಾಮಪತ್ರ ಸಲ್ಲಿಕೆಗೆ  ಕೊನೆಯ ದಿನವಾಗಿದ್ದು, ಇದೇ ೨೨ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ಉಮೇದುವಾರಿಕೆ ವಾಪಸ್ ಪಡೆಯಲು ಇದೇ ೨೯  ಕೊನೆಯ ದಿನ.  ಘೋಷಿತ ವೇಳಾಪಟ್ಟಿ ಅನುಸಾರ  ಚುನಾವಣೆ ನಡೆಸುವಂತೆ ಆಡಳಿತಾರೂಢ ಅವಾಮಿ ಲೀಗ್ ಪಕ್ಷ  ಆಯೋಗವನ್ನು ಆಗ್ರಹಿಸಿದೆ.  ಚುನಾವಣೆ ಹಿನ್ನೆಲೆಯಲ್ಲಿ ಹಂಗಾಮಿ ಸರ್ಕಾರ ರಚಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯ ಸಂವಿಧಾನಾತ್ಮಕವಲ್ಲ ಎಂದು ಅವಾಮಿ ಲೀಗ್ ತಿಳಿಸಿದೆ. ಚುನಾವಣೆಯಲ್ಲಿ ಪ್ರತಿಪಕ್ಷವಾದ  ಬಿಎನ್‌ಪಿ ಸ್ಪರ್ಧಿಸುವ ಕುರಿತು ಇನ್ನೂ ಸ್ಪಷ್ಟ ಹೇಳಿಕೆ ಹೊರಬಿದ್ದಿಲ್ಲ.