ಜಮ್ಮು ಕಾಶ್ಮೀರದಲ್ಲಿ ಪಂಚಾಯಿತಿ ಚುನಾವಣೆಗೆ ಇಂದು ಏಳನೇ ಹಂತದ ಮತದಾನ –

ಜಮ್ಮು ಮತ್ತು ಕಾಶ್ಮೀರದಲ್ಲಿ ೭ನೇ ಹಂತದ ಪಂಚಾಯತ್ ಚುನಾವಣೆ ಇಂದು ನಡೆಯಲಿದೆ.
೧೫ ಜಿಲ್ಲೆಗಳ ೩೦ ಬ್ಲಾಕ್‌ಗಳಲ್ಲಿ ಮತದಾನ ನಡೆಯಲಿದೆ. ಜಮ್ಮುವಿನ ೬ ಜಿಲ್ಲೆಯ ೧೧ ಬ್ಲಾಕ್‌ಗಳಲ್ಲಿ ಹಾಗೂ ಕಾಶ್ಮೀರ ಕಣಿವೆಯ ೯ ಜಿಲ್ಲೆಗಳ ೧೬ ಬ್ಲಾಕ್‌ಗಳಲ್ಲಿ ಚುನಾವಣೆ ನಡೆಯುತ್ತಿದೆ. ಮತಗಟ್ಟೆ ಹಾಗೂ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಮತದಾನ ಪ್ರಕ್ರಿಯೆ ನೆರವೇರಲಿದೆ.
ಪಕ್ಷಾತೀತವಾಗಿ ಒಟ್ಟು ೯ ಹಂತಗಳಲ್ಲಿ ಪಂಚಾಯತ್ ಚುನಾವಣೆ ನಡೆಯುತ್ತಿದೆ.