ಭಾರತದ ಗರಿಷ್ಠ ತೂಕ, ಗಾತ್ರ ಹಾಗೂ ಶಕ್ತಿಶಾಲಿ ಉಪಗ್ರಹವಾದ ಜಿ ಸ್ಯಾಟ್-೧೧ ಉಪಗ್ರಹ ಏರಿಯಾನ-೫ ರಾಕೆಟ್‌ನಿಂದ ಯಶಸ್ವಿ ಉಡಾವಣೆ ; ಇಸ್ರೋ ಸಂಸ್ಥೆಗೆ ಪ್ರಧಾನಮಂತ್ರಿ ಅಭಿನಂದನೆ


ಭಾರತದ ಅತಿ ಶಕ್ತಿಯುತ ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಜಿ ಸ್ಯಾಟ್-೧೧ ಯಶಸ್ವಿ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ವಿಜ್ಞಾನಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಒಂದು ಮಹತ್ವದ ಮೈಲಿಗಲ್ಲು ಇದಾಗಿದ್ದು, ಅತಿ ದುರ್ಗಮ ಪ್ರದೇಶಗಳನ್ನೂ ಸಂಪರ್ಕಿಸುವ ಮೂಲಕ ಕೋಟ್ಯಂತರ ಭಾರತೀಯರ ಜೀವನವನ್ನು ಬದಲಿಸಲಿದೆ ಎಂದು ಪ್ರಧಾನ ಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಜ್ಞಾನಿಗಳ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ. ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡುತ್ತ, ಉತ್ಕೃಷ್ಟ ಗುಣಮಟ್ಟವನ್ನು ಕಾಯ್ದುಕೊಂಡಿದ್ದಾರೆ. ಅವರ ಸಾಧನೆ ಸ್ಫೂರ್ತಿದಾಯಕ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.
****