ಕ್ರಿಕೆಟ್ : ೪ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಮೊದಲ ದಿನದ ಆಟದಲ್ಲಿ ಅಡಿಲೇಡ್ ಓವಲ್‌ನಲ್ಲಿ ದಿನದ ಆಟದ ಅಂತ್ಯಕ್ಕೆ ಭಾರತ ೯ ವಿಕೆಟ್‌ಗೆ ೨೫೦ ರನ್. ಚೇತೇಶ್ವರ ಪೂಜಾರ್ ಶತಕ – ೧೨೩.

ಭಾರತ – ಆಸ್ಟ್ರೇಲಿಯಾ ನಡುವಣ ೪ ಪಂದ್ಯಗಳ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ಆರಂಭವಾಗಿದ್ದು, ದಿನದ ಆಟದ ಅಂತ್ಯಕ್ಕೆ ಭಾರತ ೯ ವಿಕೆಟ್‌ಗಳಿಗೆ ೨೫೦ ರನ್ ಮಾಡಿದೆ. ಚೇತೇಶ್ವರ ಪೂಜಾರ ಶತಕ ಗಳಿಸಿದ್ದು, ೧೨೩ ರನ್‌ಗಳಿಗೆ ರನೌಟ್ ಆಗಿದ್ದಾರೆ.
ಇದಕ್ಕೆ ಮುನ್ನ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಬಹುಬೇಗ ತಮ್ಮ ವಿಕೆಟ್‌ಗಳನ್ನು ಕಳೆದುಕೊಂಡರು. ನಾಯಕ ಕೊಹ್ಲಿ ಸಹ ಹೆಚ್ಚು ಕಾಲ ಕ್ರೀಜ್‌ನಲ್ಲಿ ಉಳಿಯಲಿಲ್ಲ. ಅವರು ೧೬ ಬಾಲ್‌ಗಳಲ್ಲಿ ಕೇವಲ ೩ ರನ್ ಗಳಿಸಿದರು.