ಪ್ರಧಾನಮಂತ್ರಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಹೆಚ್ಚು ಜನಪ್ರಿಯ ನಾಯಕ ಎಂದು ಇನ್‌ಸ್ಟಾಗ್ರಾಮ್ ಮಾಹಿತಿ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ – ಇನ್‌ಸ್ಟಾಗ್ರಾಮ್‌ನಲ್ಲಿ ೧೪.೮ ದಶಲಕ್ಷ ಅಭಿಮಾನಿಗಳನ್ನು ಹೊಂದಿದ್ದು, ಅತ್ಯಂತ ಜನಪ್ರಿಯ ಜಾಗತಿಕ ಮುಖಂಡರಾಗಿ ಹೊರಹೊಮ್ಮಿದ್ದಾರೆ.

ಆನ್‌ಲೈನ್ ವೇದಿಕೆ ಟ್ವಿಪ್ಲೋಮ್ಯಾಸಿ ಪ್ರಕಟಿಸಿರುವ ಪಟ್ಟಿಯೊಂದರ ಪ್ರಕಾರ ಇಂಡೋನೇಷಿಯಾ ಅಧ್ಯಕ್ಷ ಜೊಕೋ ವಿಡೋಡೊ ಅವರಿಗೆ ೧೨.೨ ದಶಲಕ್ಷ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ೧೦ ದಶಲಕ್ಷ ಫಾಲೋವರ್ರ‍್ಸ್ ಇದ್ದು, ಪಟ್ಟಿಯಲ್ಲಿ ಕ್ರಮವಾಗಿ ೨ ಮತ್ತು ೩ನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ವಿವಾಹವಾದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಚಿತ್ರನಟಿ ಅನುಷ್ಕಾ ಶರ್ಮ ಜೋಡಿ ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿಯಾದ ಚಿತ್ರ ಯಾವುದೇ ಜಾಗತಿಕ ಮುಖಂಡ ಪೋಸ್ಟ್ ಮಾಡಿರುವ, ಅತಿ ಹೆಚ್ಚಿನ ಸಂಖ್ಯೆಯ ಜನರು ಇಷ್ಟಪಟ್ಟ ಚಿತ್ರವಾಗಿದೆ.

ವಿಶ್ವ ಆರ್ಥಿಕ ವೇದಿಕೆ – ೨೦೧೮ರ ಹಿನ್ನೆಲೆಯಲ್ಲಿ ಸ್ನೋಯಿ ಡಾವೋಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಸ್ ನಿಲ್ದಾಣದಲ್ಲಿ ನಿಂತಿರುವ ಚಿತ್ರವನ್ನು ೧೬ ಲಕ್ಷ ೩೫ ಸಾವಿರದ ೯೯೮ ಮಂದಿ ಇಷ್ಟಪಟ್ಟಿದ್ದಾರೆ.