ಬ್ಯಾಂಕುಗಳ ಸಾಲ ನೀಡಿಕೆ ಸಾಮರ್ಥ್ಯ ಹೆಚ್ಚಳಕ್ಕಾಗಿ ಸಾರ್ವಜನಿಕ ವಲಯದ ೪ ಬ್ಯಾಂಕುಗಳಲ್ಲಿ ಸರ್ಕಾರದಿಂದ ೧೧ ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ.

ಏಳನೇ ಶ್ರೇಣಿಯ ಚುನಾವಣಾ ಬಾಂಡ್‌ಗಳನ್ನು ಇಂದಿನಿಂದ ಮಾರಾಟ ಮಾಡಲಾಗುತ್ತಿದ್ದು, ಈ ತಿಂಗಳ ಹತ್ತರವರೆಗೆ ಮಾರಾಟ ಪ್ರಕ್ರಿಯೆ ನಡೆಯಲಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಮಾರಾಟ ಮಾಡುವ ಅಧಿಕಾರ ಹೊಂದಿದ್ದು, ೨೯ ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡುಗಳನ್ನು ನಗದೀಕರಿಸಿಕೊಳ್ಳುತ್ತದೆ.
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ನಗದು ದೇಣಿಗೆಯ ಬದಲು ಈ ಬಾಂಡ್‌ಗಳನ್ನು ಜಾರಿಗೆ ತರಲಾಗಿದೆ.
೨೦೧೮, ನವೆಂಬರ್‌ನಲ್ಲಿ ೬ನೇ ಶ್ರೇಣಿಯಲ್ಲಿ ೧ ಸಾವಿರದ ೫೭ ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸಾರ್ವಜನಿಕರು, ಹಾಗೂ ದೇಣಿಗೆದಾರರು ಖರೀದಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.