ಹಿಂದಿ ಚಿತ್ರರಂಗದ ಹಿರಿಯ ನಟ, ಸಂಭಾಷಣೆಕಾರ ಖಾದರ್ ಖಾನ್ ನಿಧನ

ಹಿಂದಿ ಚಲನಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಖಾದರ್ ಖಾನ್ ದೀರ್ಘ ಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕೆನಡಾದ ಅಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇಂದು ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬವರ್ಗ ಮಾಹಿತಿ ನೀಡಿದೆ. ಕಾಬೂಲ್‌ನಲ್ಲಿ ಜನಿಸಿದ್ದ ಖಾದರ್ ಖಾನ್ ೧೯೭೩ರಲ್ಲಿ ರಾಜೇಶ್ ಖನ್ನಾ ಅವರ ದಾಗ್ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ ಚಿತ್ರರಂಗ ಪ್ರವೇಶಿಸಿದರು.
೩೦೦ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದು, ಖಾದರ್ ಖಾನ್ ಅವರು ೨೫೦ಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.