ಕರ್ನಾಟಕದ ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ನಡೆಯುತ್ತಿರುವ ೩ನೇ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಷಿಪ್ ನ ಎರಡನೇ ದಿನವಾದ ನಿನ್ನೆ ಚಂಡೀಗಢ, ದೆಹಲಿ ಮತ್ತು ಪಂಜಾಬ್ ಬಾಕ್ಸರ್ ಗಳು ಪ್ರಾಬಲ್ಯ ಸಾಧಿಸಿದ್ದಾರೆ.
ನಿನ್ನೆ ನಡೆದ ೫೪ಕೆಜಿ ವಿಭಾಗದಲ್ಲಿ ದೆಹಲಿಯ ರಿಯಾ ಟೊಕಾಸ್ ೫-೦ ಅಂತರದಲ್ಲಿ ತಮಿಳುನಾಡಿನ ವಿ. ವಿನೋಧಿನಿ ವಿರುದ್ಧ ಏಕಪಕ್ಷೀಯ ಜಯ ಗಳಿಸಿದ್ದಾರೆ. ಚಂಡೀಗಢದ ಸೊಹಿನಿ ೬೯ಕೆಜಿ ವಿಭಾಗದಲ್ಲಿ ತೆಲಂಗಾಣದ ಸಾಯಿ ಶ್ರೀ ರೆಡ್ಡಿ ವಿರುದ್ಧ ಸುಲಭ ಜಯ ಗಳಿಸಿದ್ದಾರೆ.
ಚಾಂಪಿಯನ್ ಷಿಪ್ ನ ಮೂರನೇ ದಿನವಾದ ಇಂದು ಅಂತಾರಾಷ್ಟ್ರೀಯ ಸ್ಟಾರ್ ಗಳಾದ ನಿಖತ್ ಝರಿನ್, ಪಿಂಕಿ ಜಂಗ್ರಾ, ಸಿಮ್ರಂಜಿತ್ ಕೌರ್, ಸೋನಿಯಾ ಲಾಥರ್ ಮತ್ತು ಶಶಿ ಚೋಪ್ರಾ ಸೇರಿದಂತೆ ಹಲವು ಅಗ್ರಮಾನ್ಯ ಬಾಕ್ಸರ್ ಗಳು ಕಣಕ್ಕಿಳಿಯಲಿದ್ದಾರೆ.