ಸಿಡ್ನಿಯಲ್ಲಿ ನಡೆಯುತ್ತಿರುವ ೪ನೆಯ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ದಿನದ ಆಟದ ಅಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಸ್ಕೋರ್ ೪ವಿಕೆಟ್‌ಗೆ ೩೦೩ರನ್.

ಸಿಡ್ನಿಯಲ್ಲಿ ನಡೆಯುತ್ತಿರುವ ೪ನೇ ಮತ್ತು ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಭಾರತ ಮೊದಲನೆ ದಿನದ ಆಟದ ಕೊನೆಯಲ್ಲಿ ೪ ವಿಕೆಟ್ ನಷ್ಟಕ್ಕೆ  ೩೦೩ ರನ್ ಗಳಿಸಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಪಂದ್ಯಾವಳಿಯ ೪ ಪಂದ್ಯಗಳಲ್ಲಿ ಭಾರತ ೨-೧ ರ ಮುನ್ನಡೆ ಕಾಯ್ದುಕೊಂಡಿದ್ದು, ಮೆಲ್ಬೋರ್ನ್‌ನ ಜಯದ ಮೂಲಕ ಬಾರ್ಡರ್ ಗಾವಸ್ಕರ್ ಟ್ರೋಫಿಯನ್ನು ಈಗಾಗಲೇ ಉಳಿಸಿಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಫೈನಲ್ ಟೆಸ್ಟ್‌ಗೆ ಅತ್ಯಂತ ಸುಲಭವಾಗಿ ಪ್ರವೇಶ ಪಡೆಯಲಿರುವ ಭಾರತದ ಏಕೈಕ ಕ್ಯಾಪ್ಟನ್ ವಿರಾಟ್ ಕೋಹ್ಲಿ ಆಗಿದ್ದಾರೆ. ವಿದೇಶಿ ನೆಲದಲ್ಲಿ ೧೧ ಟೆಸ್ಟ್ ಮ್ಯಾಚ್‌ಗಳನ್ನು ಗೆದ್ದ ಸೌರವ್ ಗಂಗೂಲಿ ದಾಖಲೆಯನ್ನು ಈಗಾಗಲೇ ಮೀರಿಸಿದ ಕೋಹ್ಲಿ ಇನ್ನೊಂದು ಗೆಲುವು ಸಾಧಿಸಿದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಇನ್ನೊಂದೆಡೆ ಭಾರತ ವಿರುದ್ಧ ತಾಯ್ನಾಡಿನಲ್ಲಿ ಎಂದೂ ಸೋಲದ ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆತಂಕದ ಸ್ಥಿತಿಯಲ್ಲಿದೆ.