ನವದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಇಂದಿನಿಂದ ೧೦ ದಿನಗಳ ಕಾಲ ಇಂಡಿಯನ್ ಪನೋರಮಾ ಚಲನಚಿತ್ರೋತ್ಸವ

ನವದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಇಂದಿನಿಂದ ೧೦ ದಿನಗಳ ಕಾಲ ಇಂಡಿಯನ್ ಪನೋರಮಾ ಚಲನಚಿತ್ರೋತ್ಸವ ಆರಂಭವಾಗಲಿದೆ.

೨೬ ಚಲನಚಿತ್ರ ಮತ್ತು ೨೧ ಕಿರುಚಿತ್ರ, ಸಾಕ್ಷ್ಯಚಿತ್ರ ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.

ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಮಿತ್ ಖಾರೆ ಈ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಚಲನಚಿತ್ರೋತ್ಸವದ ನಿರ್ದೇಶನಾಲಯದ ವತಿಯಿಂದ ಆರಂಭವಾಗಿರುವ ಈ ಚಲನಚಿತ್ರೋತ್ಸವ ೧೪ನೇ ತಾರೀಖಿನವರೆಗೆ ಮುಂದುವರಿಯಲಿದೆ.

ನಿರ್ದೇಶಕರಾದ ಖಾರವಸ್, ಆದಿತ್ಯಾ ಸುಹಾಸ್ ಜಂಬಾಲೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

೪೯ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಎಲ್ಲ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.

ಚಲನಚಿತ್ರೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ದೊರೆಯಲಿದೆ.