ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಣಿಪುರ, ಅಸ್ಸಾಂಗೆ ಭೇಟಿ; ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಣಿಪುರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.

ಎರಡೂ ರಾಜ್ಯಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮೊರೆ ಎಂಬಲ್ಲಿ ಸಂಯೋಜಿತ ಚೆಕ್‌ಪೋಸ್ಟ್‌ಗೆ ಮೋದಿ ಚಾಲನೆ ನೀಡಲಿದ್ದಾರೆ. ಸಾವೊಮ್‌ಬರ್ಗ್‌ನಲ್ಲಿ ಆಹಾರ ದಾಸ್ತಾನು ಘಟಕವನ್ನು ಉದ್ಘಾಟಿಸಲಿರುವ ಮೋದಿ, ತಂಗಲ್ ಸುರುಂಗ್ ಎಂಬಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಕಾಂಪ್ಲೆಕ್ಸ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಸಿಲ್ಚರ್ ಮತ್ತು ಇಂಫಾಲ್ ನಡುವಿನ ೪೦೦ ಕಿಲೋ ವ್ಯಾಟ್ ಡಬಲ್ ಸರ್ಕೀಟ್ ಮಾರ್ಗವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಧನಮಂಜುರಿ ವಿಶ್ವವಿದ್ಯಾಲಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇಂಫಾಲ್‌ನಲ್ಲಿ ಕ್ರೀಡಾ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ಪೂರ್ವ ಇಂಫಾಲ್‌ನ ಹಪ್ತಾ ಕಂಜೇಬಂನ್ ಎಂಬಲ್ಲಿ ಹಾಗೂ ಅಸ್ಸಾಂನ ಸಿಲ್ಚರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.