ಮೂರನೇ ಆವೃತ್ತಿಯ ರಾಷ್ಟ್ರೀಯ ಉದ್ಯಮಶೀಲ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಇಂದು; ೪೩ ಸಾಧಕರಿಗೆ ಪ್ರಶಸ್ತಿ ಪ್ರದಾನ

ಮೂರನೇ ಆವೃತ್ತಿಯ ರಾಷ್ಟ್ರೀಯ ಉದ್ಯಮಶೀಲ ಪ್ರಶಸ್ತಿ ಸಮಾರಂಭ ನವದೆಹಲಿಯಲ್ಲಿ ಇಂದು ನಡೆಯಲಿದೆ.

ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪರಿಸರ ಸ್ನೇಹಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅಸಾಧಾರಣ ಸೇವೆಯನ್ನು ನೀಡಿದ ಯುವ ಉದ್ಯಮಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ೪೩ ಯುವ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿ ವಿಜೇತರಿಗೆ ೫ ರಿಂದ ೧೦ ಲಕ್ಷ ರೂಪಾಯಿ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು.