ಸಿಡ್ನಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ೩ನೇ ದಿನದ ಅಂತ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ೬ವಿಕೆಟ್ ನಷ್ಟಕ್ಕೆ ೨೩೬ ರನ್ ಗಳಿಸಿದೆ. ನಿನ್ನೆ ಎರಡನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ೨೪ ರನ್ಗಳಿಸಿದ್ದ ಆಸ್ಟ್ರೇಲಿಯಾ, ಇಂದಿನ ಅಟ ಮುಂದುವರಿಸಿತು. ಇಂದು ಮಂದ ಬೆಳಕಿನಿಂದಾಗಿ ಆಟಕ್ಕೆ ಅಡಚಣೆಯಾಯಿತು.