ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದಿಂದ ಸಾವಿನ ಸಂಖ್ಯೆ ೧೨೬ಕ್ಕೆ ಏರಿಕೆ

ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದಿಂದ ಉಂಟಾದ ಪ್ರವಾಹ ಮತ್ತು ಭೂ ಕುಸಿತಗಳಿಂದ ಮೃತಪಟ್ಟವರ ಸಂಖ್ಯೆ ೧೨೬ಕ್ಕೇರಿದೆ.ಮನಿಲಾ ಪ್ರಾಂತ್ಯದ ಬಿಕೋಲ್ ಪರ್ವತ ಪ್ರದೇಶದಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.ಘಟನೆಗಳಲ್ಲಿ ೭೫ ಮಂದಿ ಗಾಯಗೊಂಡಿದ್ದು, ೨೬ ಮಂದಿ ಕಾಣೆಯಾಗಿದ್ದಾರೆ. ಚಂಡಮಾರುತದಿಂದ ಒಂದು ಲಕ್ಷ ೫೨ ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಚಂಡಮಾರುತದಿಂದ ಭಾರಿ ಮಳೆ ಸುರಿದ ಕಾರಣದಿಂದ ಹೆಚ್ಚು ಸಾವು ಸಂಭವಿಸಿದೆ ಎಂದು ಸ್ಥಳೀಯ ಆಡಳಿತಗಳು ತಿಳಿಸಿವೆ. ಕಳೆದ ತಿಂಗಳ ೨೯ ರಂದು ಫಿಲಿಫೈನ್ಸ್‌ನ ಕೇಂದ್ರ ಹಾಗೂ ಪೂರ್ವ ಪ್ರಾಂತ್ಯಗಳಿಗೆ ಚಂಡ ಮಾರುತ ಅಪ್ಪಳಿಸಿತ್ತು.