ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ೪ನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ೪ನೇ ದಿನವಾದ ಇಂದು ಮಳೆಯಿಂದಾಗಿ ಪಂದ್ಯ ಆರಂಭ ತಡವಾಗಿದೆ.
ನಿನ್ನೆ ಸಂಜೆಯೂ ಮಳೆಯಿಂದಾಗಿ ದಿನದಾಟ ಬೇಗನೆ ಅಂತ್ಯಗೊಂಡಿತ್ತು. ಪ್ರಸ್ತುತ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ ೬ ವಿಕೆಟ್ ನಷ್ಟಕ್ಕೆ ೨೩೬ ರನ್ ಗಳಿಸಿದೆ.
ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ೭ ವಿಕೆಟ್ ಕಳೆದುಕೊಂಡು ೬೨೨ ಬೃಹತ್ ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾಕ್ಕಿಂತ ಭಾರತ ಒಟ್ಟು ೩೮೬ ರನ್ಗಳ ಮುನ್ನಡೆ ಸಾಧಿಸಿದೆ.
೪ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ೨-೧ ಅಂತರದಿಂದ ಮುಂದಿದೆ.