ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ನG ಮುಖ್ಯ ಆರ್ಥಿಕ ತಜ್ಞೆಯಾಗಿ ಭಾರತೀಯ ಸಂಜಾತೆ ಮೈಸೂರಿನವರಾದ ಗೀತಾ ಗೋಪಿನಾಥ್ಗೆ್ ಅಧಿಕಾರ

ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್‍ನ ಮುಖ್ಯ ಆರ್ಥಿಕ ತಜ್ಞೆಯಾಗಿ ಭಾರತೀಯ ಸಂಜಾತೆ ಗೀತಾ ಗೋಪಿನಾಥ್ ಸೇರ್ಪಡೆಯಾಗಿದ್ದಾರೆ. ಇವರು ಕರ್ನಾಟಕದ ಮೈಸೂರು ಮೂಲದವರು.

ಐಎಂಎಫ್‍ನ ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯ ಮಹಿಳೆ  ಗೀತಾ ಆಗಿದ್ದಾರೆ.

ಈ ಮುನ್ನ ಮೌರಿ ಅಬ್ಸ್ಟ್ ಫೆಲ್ಡ್ ಅವರು,  ಐಎಂಎಫ್‍ನ ರಿಸರ್ಚ್ ವಿಭಾಗದ  ನಿರ್ದೇಶಕರು ಹಾಗೂ ಆರ್ಥಿಕ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರು, ಕಳೆದ ಡಿಸೆಂಬರ್ 31ರಂದು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಐಎಂಎಫ್‍ನ 11ನೇ ಮುಖ್ಯ ಆರ್ಥಿಕ ತಜ್ಞೆಯಾಗಿ ಗೀತಾ ಗೋಪಿನಾಥ್ ಆಯ್ಕೆಯಾಗಿದ್ದಾರೆ.