ಖಾಸಗಿ ಚಾನೆಲ್ಗರಳಲ್ಲಿ ಇಂದಿನಿಂದ ಆಕಾಶವಾಣಿಯ ಸುದ್ದಿ ಪ್ರಸಾರ – ವಾರ್ತಾ ಮತ್ತು ಪ್ರಸಾರ ಸಚಿವ ಕರ್ನಲ್ ರಾಜ್ಯವರ್ಧನ್ ರಾಥೋಡ್ ಅವರಿಂದ ಮಧ್ಯಾಹ್ನ ಚಾಲನೆ

ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಖಾಸಗಿ ಎಫ್‍ಎಂ ಚಾನೆÀಲ್‍ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.   ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ದೆಹಲಿಯಲ್ಲಿ ಇಂದು ಮಧ್ಯಾಹ್ನ ಈ ಸೇವೆಯನ್ನು ಉದ್ಘಾಟಿಸಲಿದ್ದಾರೆ.

ಆಕಾಶವಾಣಿಯೊಂದಿಗೆ  ಮಾತನಾಡಿದ  ಕರ್ನಲ್ ರಾಥೋಡ್ ಅವರು , ಇದೊಂದು ಪ್ರಮುಖ ಬೆಳವಣಿಗೆ ಈ ಮೂಲಕ ಬೃಹತ್ ಜನ ಸಮೂಹವನ್ನು  ಆಕಾಶವಾಣಿ ಬಹಳ ಸುಲಭವಾಗಿ ಸುದ್ದಿ ಮೂಲಕ ತಲುಪಲಿದೆ ಎಂದರು.

ಮಾಧ್ಯಮಗಳಲ್ಲಿ ಮುಖ್ಯ ಪಾತ್ರವಹಿಸಿರುವ  ರೇಡಿಯೋ ಮೂಲಕವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ  ಮನ್ ಕಿ ಬಾತ್ ಕಾರ್ಯಕ್ರಮ ಜನಪ್ರಿಯತೆ ಗಳಿಸಿದೆ. ಆಕಾಶವಾಣಿ ಎಫ್‍ಎಂ ವಾಹಿನಿಗಳು ದೇಶದ ಶೇಕಡ 50ರಷ್ಟು ಜನರನ್ನು ತಲುಪುತ್ತಿದೆ. ಹೀಗಾಗಿ ಯುಪಿಎ ಸರ್ಕಾರವು ಜನರನ್ನು ತಲುಪಲು  ಮಾಧ್ಯಮಗಳನ್ನೇ ಅತಿ ಹೆಚ್ಚು ಬಳಸಿಕೊಂಡಿದ್ದು, 2009ರಿಂದ 2014ರ ಅವಧಿಯಲ್ಲಿ 56 ಕೋಟಿ ಚದರ ಸೆಂಟಿಮೀಟರ್ ವ್ಯಾಪ್ತಿಯನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ಬಳಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಸಂವಿಧಾನದ ಮಾನ್ಯತೆ ಹೊಂದಿರದ  ಯುಪಿಎ  ಮೈತ್ರಿಕೂಟದ ಅಧ್ಯಕ್ಷರ ಭಾವಚಿತ್ರವನ್ನೂ ಪತ್ರಿಕೆಗಳ ಜಾಹೀರಾತಿನಲ್ಲಿ ನೀಡಲಾಗಿದ್ದು, ಮಾಧ್ಯಮಗಳ ಪ್ರಬಲತೆಯನ್ನು ಅರಿಯಬಹುದು ಎಂದು ರಾಥೋಡ್ ತಿಳಿಸಿದರು.