ನಾಲ್ಕನೇ ಆವೃತ್ತಿಯ ರೈಸಿನಾ ಹಿಲ್ಸ್ ಚರ್ಚೆ ಇಂದು ನವದೆಹಲಿಯಲ್ಲಿ ಆರಂಭ

ನಾಲ್ಕನೇ ಆವೃತ್ತಿಯ ರೈಸಿನಾ ಹಿಲ್ಸ್ ಚರ್ಚೆ ಇಂದು ನವದೆಹಲಿಯಲ್ಲಿ ಆರಂಭವಾಗಲಿದೆ. ನಾರ್ವೆ ಪ್ರಧಾನಮಂತ್ರಿ ಎರ್ನಾ ಸೋಲ್ಬರ್ಗ್ ಉದ್ಘಾಟನಾ ಸಮಾರಂಭದಲ್ಲಿ ಮೊದಲು ಭಾಷಣ ಮಾಡಲಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಸಮಾರಂಭದ ಮುಖ್ಯ ಅತಿಥಿಗಳಾಗಲಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತು ಅಬ್ಸರ್‌ವರ್ ರೀಸರ್ಚ್ ಫೌಂಡೇಷನ್ ಜಂಟಿಯಾಗಿ ಈ ಸಮಾರಂಭವನ್ನು ಆಯೋಜಿಸಿದೆ. ಎ ವಲ್ಡ್ ರೆಕಾರ್ಡರ್ – ನ್ಯೂ ಜಿಯೋ ಮೆಟ್ರೀಸ್, ಫ್ಲುಯಿಡ್ ಪಾರ್ಟನರ್‌ಷಿಪ್, ಅನ್‌ಸರ್ಟನ್ ಔಟ್ ಕಮ್ಸ್ ಎಂಬುದು ಈ ಭಾರಿಯ ಧ್ಯೇಯವಾಕ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬದಲಾವಣೆಗಳು ಹಾಗೂ ಇತರೆ ವಿದ್ಯಮಾನಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ಅಲ್ಲದೇ ಕ್ರಿಯಾಶೀಲ ಯೋಜನೆಗಳನ್ನು ಕೈಗೊಳ್ಳುವುದು, ಹೊಸ ತಂತ್ರಜ್ಞಾನಗಳನ್ನು ಅವಿಷ್ಕಾರದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ೯೩ ದೇಶಗಳ ೬೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.