ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಾರ್ವೆ ಪ್ರಧಾನಿ ಎರ್ನಾ ಸೋಲ್ಬರ್ಗ್ ಅವರ ಜೊತೆ ದೆಹಲಿಯಲ್ಲಿಂದು ಮಾತುಕತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಾರ್ವೆ ಪ್ರಧಾನಮಂತ್ರಿ ಎರ್ನಾ ಸೋಲ್ಬರ್ಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಇಂದು ಮಧ್ಯಾಹ್ನದ ನಂತರ ನಡೆಯುವ ಮಾತುಕತೆಯಲ್ಲಿ ಎರಡೂ ದೇಶಗಳು ದಿಪಕ್ಷೀಯ ಸಂಬಂಧಗಳ ಪ್ರಗತಿಯ ಪರಿಶೀಲನೆ ನಡೆಸಲಿವೆ ಹಾಗೂ ಸಮಾನ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಬಹು ಹಂತದ ಸಹಭಾಗಿತ್ವ ವಿಸ್ತರಿಸುವ ಕುರಿತಂತೆ ಚರ್ಚೆ ನಡೆಯಲಿವೆ.

ಸದ್ಯ ಇರುವ 1.2 ಶತಕೋಟಿ ಡಾಲರ್ ವಹಿವಾಟಿನಲ್ಲಿ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸುವುದು ಕುರಿತಂತೆ ಹಲವಾರು ಒಪ್ಪಂದಗಳಿಗೆ ಈ ಸಂದರ್ಭದಲ್ಲಿ ಉಭಯ ದೇಶಗಳು ಸಹಿ ಹಾಕಲಿವೆ.

ಸಭೆಯ ನಂತರ ಎರ್ನಾ ಸೋಲ್ಬರ್ಗ್ ಅವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನ್ನು ಭೇಟಿಯಾಗಲಿದ್ದಾರೆ.