ಭಾರತೀಯ ವಿಜ್ಞಾನ ಸಮ್ಮೇಳನ – ವಿಜ್ಞಾನದಲ್ಲಿ ಹೊಸ ದಿಸೆಯ ಅನ್ವೇಷಣೆ

ಭಾರತೀಯ ವಿಜ್ಞಾನ ಕಾಂಗ್ರೆಸ್ ನ ೧೦೬ ನೇ ಅಧಿವೇಶನವು ಪಂಜಾಬಿನ ಜಲಂಧರ್ ನಲ್ಲಿ ಸಂಪನ್ನವಾಯಿತು. ವಾರ್ಷಿಕವಾಗಿ ನಡೆಯುವ ಈ ಸಮ್ಮೇಳನದಲ್ಲಿ ದೇಶ ವಿದೇಶದಿಂದ ಆಗಮಿಸುವ ವಿಜ್ಞಾನ ಕ್ಷೇತ್ರದ ಪ್ರತಿಭಾವಂತರು ಭಾಗವಹಿಸುತ್ತಾರೆ. ಭಾರತದಲ್ಲಿ  ವಿಜ್ಞಾನ ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಜ್ಞಾನ ನಿರ್ವಾಹಕರು, ವಿಜ್ಞಾನಿಗಳು ಮತ್ತು ವಿಜ್ಞಾನದ ಬಗ್ಗೆ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಾಧ್ಯಾಪಕ ಪಿ.ಎಸ್. ಮ್ಯಾಕ್ ಮಹೊನ್ ಮತ್ತು ಪ್ರೋಫೆಸರ್ ಸಿಮೋನ್ಸೆನ್ ಎಂಬ ಇಬ್ಬರು ಬ್ರಿಟೀಷ್ ರಸಾಯನ ತಜ್ಞರು ೧೯೧೪ ರಲ್ಲಿ ಕೋಲ್ಕತ್ತಾದ ಅಸಿಯಾಟಿಕ್ ಸೊಸೈಟಿಯಲ್ಲಿ ಮೊದಲ ಅಧಿವೇಶನ ನಡೆಸಿದರು. ಭಾರತದಲ್ಲಿನ ವೈಜ್ಞಾನಿಕ ಸಂಶೋಧನೆಗಳನ್ನು ಥಳಕು ಹಾಕಲು ಬ್ರಿಟಿಷ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ ಮಾದರಿಯಲ್ಲಿ ಈ ಸಮ್ಮೇಳನ ಪ್ರಾರಂಭಿಸಲಾಯಿತು.

20 ನೇ ಶತಮಾನದ ಆರಂಭದಲ್ಲಿ 105 ಸದಸ್ಯರ ಭಾಗವಹಿಸುವಿಕೆಯೊಂದಿಗೆ ಆರಂಭಗೊಂಡ ಸಮ್ಮೇಳನದಲ್ಲಿ 35 ಪೇಪರ್ ಗಳು ಮಂಡನೆಯಾಗಿದ್ದಾರೆ ಈಗ 3000 ಕ್ಕಿಂತ ಹೆಚ್ಚು ವಿಜ್ಞಾನಿಗಳು ವಿಜ್ಞಾನದ ಎಲ್ಲ ವಿಭಾಗದಿಂದ ಭಾಗವಹಿಸುತ್ತಿದ್ದಾರೆ. ಇದು ಭಾರತೀಯ ವಿಜ್ಞಾನಿಗಳಿಗೆ ಅಂತಾರಾಷ್ಟ್ರೀಯ ಸಮುದಾಯದ ವಿಜ್ಞಾನಿಗಳೊಂದಿಗೆ ತಮ್ಮ ಸಾಧನೆಯನ್ನು ಹಂಚಿಕೊಳ್ಳಲು ವೇದಿಕೆ ಒದಗಿಸುತ್ತದೆ. ಅಷ್ಟೆ ಅಲ್ಲದೆ ಯುವ ವಿಜ್ಞಾನಿಗಳಿಗೆ ತಮ್ಮ ಕ್ಷೇತ್ರದ ಹಿರಿಯ ವಿಜ್ಞಾನಿಗಳು, ಸಂಶೋಧಕರೊಂದಿಗೆ ಸಮಾಲೋಚಿಸಿ ಜ್ಞಾನಾರ್ಜನೆ ಮಾಡಲು ಅನುಕೂಲಕಾರಿಯಾಗಿದೆ. ವಿಜ್ಞಾನ ಕಾಂಗ್ರೆಸ್ ನಲ್ಲಿ ನ ಆಸಕ್ತಿದಾಯಕ ಘಟನೆಯೆಂದರೆ ಶಾಲೆ- ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮಕ್ಕಳ ವಿಜ್ಞಾನ ಕಾಂಗ್ರೆಸ್ ಗೆ ಅವಕಾಶ ನೀಡಿದ್ದು. ದೇಶದ ಭವಿಷ್ಯವಾಗಿರುವ  ಸಾವಿರಾರು ಮಕ್ಕಳು ಪಂಜಾಬ್ ನ ವಿವಿಧ ಭಾಗಗಳಿಂದ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದರು. ದೇಶದ ಮುಂಚೂಣಿ ಮತ್ತು ನೊಬೆಲ್‌ ಪುರಸ್ಕೃತ ವಿಜ್ಞಾನಿಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಿತು. ಜಲಂಧರ್ ನಲ್ಲಿ ಮಕ್ಕಳ ಅಧಿವೇಶನವನ್ನು ಉದ್ಘಾಟಿಸಿ ಮಾತಾನಾಡಿದ ಇಸ್ರೇಲ್ ನ ನೊಬೆಲ್ ಪುರಸ್ಕೃ ವಿಜ್ಞಾನಿ  ಅವ್ರಮ್ ಹೆರಸ್ಕೋ ಅಧಿವೇಶನದಲ್ಲಿ  ಭಾಗವಹಿಸಿದ ಮಕ್ಕಳು ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಒಳಿತು ಮಾಡಬಹುದದಾದ ಸಂಶೋಧನೆ ನಡೆಸಬಹುದು ಎಂಬ ಆಶಾಭಾವನೆ‌ ವ್ಯಕ್ತಪಡಿಸಿದರು. ಅಮೆರಿಕದ ನೊಬೆಲ್ ಪುರಸ್ಕೃತ ಪ್ರೊಫೆಸರ್ ಡಂಕನ್ ಗಡೆನ್ ಭವಿಷ್ಯದ ತಾಂತ್ರಿಕ ಅಭಿವೃದ್ಧಿಯಲ್ಲಿ ಭಾರತವು ಒಂದು ಭಾಗವಾಗಿದ್ದು, ಯುವಕರು ಗಣಿತ ಕಲಿಯಬೇಕು ಎಂದು ಕರೆ ನೀಡಿದರು.   

ವಾರ್ಷಿಕ ವಿಜ್ಞಾನ ಕಾಂಗ್ರೆಸ್ ಭಾರತೀಯ ವಿಜ್ಞಾನಿಗಳಿಗೆ ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಇದು ರಾಷ್ಟ್ರೀಯ ವೈಜ್ಞಾನಿಕ ಸಮುದಾಯದಲ್ಲಿ ರಾಷ್ಟ್ರವನ್ನು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ, ಸಾಮರ್ಥ್ಯವನ್ನು ನೀಡುತ್ತದೆ. ಇದು ಕೃಷಿ, ಆರೋಗ್ಯ ಅಥವಾ ಯಾವುದೇ ಕ್ಷೇತ್ರವಾಗಿರಬಹುದು. ಭಾರತವು ಚಲಾಯಿಸುವ ತಂತ್ರಜ್ಞಾನದ ಸ್ಥಳಗಳಿಗೆ ಪ್ರಮುಖ ವೈಜ್ಞಾನಿಕ ಶಕ್ತಿಯಾಗಿದೆ. ಮುಂದುವರಿದ ರಾಷ್ಟ್ರಗಳ ತಂತ್ರಜ್ಞಾನ-ನಿರಾಕರಣೆಯ ಪ್ರಮುಖರಿಂದ ಅನೇಕ ಸಾಧನೆಗಳು ಪ್ರಚೋದಿಸಲ್ಪಟ್ಟಿವೆ.

ಜಲಂಧರ್ ಕಾಂಗ್ರೆಸ್ ಅನ್ನು ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತೀಯ ಪ್ರಧಾನ ಮಂತ್ರಿ ಅವರು ಸಂಶೋಧನೆಯನ್ನು ರಾಷ್ಟ್ರೀಯ ಆದ್ಯತೆ ಎಂದು ಪ್ರಕಟಿಸಿದರು. “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೊತೆಗೆ ಜೈ ಸಂಶೋಧನ್” (ಸಂಶೋಧನಾ)  ಸೇರಿಸಿ ಘೋಷಿಸಿದರು. ಸಾರ್ವತ್ರಿಕ ಆರೋಗ್ಯ ಮತ್ತು ಕೃಷಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಜ್ಞಾನಿಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ಕರೆ ನೀಡಿದರು‌.”ಭವಿಷ್ಯದ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಹೊಸ ಪೀಳಿಗೆಯ ಸೃಜನಶೀಲ, ಶಕ್ತಿಯುತ ಮತ್ತು ಆತ್ಮವಿಶ್ವಾಸದ ಮನಸ್ಸುಗಳೊಂದಿಗೆ ಭಾರತ ಶಕ್ತವಾಗಿದೆ” ಎಂದು ಪ್ರಧಾನಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ, “ಹುಸಿ-ವಿಜ್ಞಾನ” ಸೇರಿಕೊಂಡಿದ್ದರೂ ಉಳಿದಂತೆ ಪ್ರಗತಿಶೀಲ ಮತ್ತು ರಚನಾತ್ಮಕ ವಿವೇಚನೆಯೊಳಗೆ ಸಾಗುತ್ತಿದೆ. ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ಪ್ರೊ. ವಿಜಯ್ ರಾಘವನ್ ಅವರ ಪ್ರಕಾರ, ಹುಸಿ-ವಿಜ್ಞಾನ “ಒಂದು ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ.ಇದು ವಿಜ್ಞಾನದ ಕಾರಣವನ್ನು ಹಾಳುಮಾಡುತ್ತದೆ. ನಿಸ್ಸಂದೇಹವಾಗಿ, ಅನೇಕ ವೈಜ್ಞಾನಿಕ ಗ್ರಂಥಗಳ ಬಗ್ಗೆ ಹಲವಾರು ಪ್ರಾಚೀನ ಉಲ್ಲೇಖಗಳಿವೆ, ಆದರೆ ಇವುಗಳು ಅಂತಿಮ ತೀರ್ಮಾನಗಳಿಗೆ ಬರುವ ಮೊದಲು ಆಧುನಿಕ ವೈಜ್ಞಾನಿಕ ಪರಿಕರಗಳೊಂದಿಗೆ ಮೌಲ್ಯೀಕರಿಸಬೇಕಾಗಿದೆ”.

ಬರಹ: ಎನ್. ಭದ್ರನ್ ನಾಯರ್, ಹಿರಿಯ ವಿಜ್ಞಾನ ವಿಶ್ಲೇಷಕ