ಭಾರತ ಮತ್ತು ಜಪಾನ್ ನಡುವಿನ ರಚನಾತ್ಮಕ ಪಾಲುದಾರಿಕೆ ಹಾಗೂ ವಿಶೇಷ ಸೌಹಾರ್ದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಬದ್ಧರಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಜಪಾನ್ ವಿದೇಶಾಂಗ ವ್ಯವಹಾರ ಸಚಿವ ತಾರೊ ಕೊನೊ ಅವರೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಜಪಾನ್ ಜತೆಗಿನ ಮತ್ತೊಂದು ಸುತ್ತಿನ ವಾರ್ಷಿಕ ಸಭೆಯನ್ನು ನಡೆಸಲು ಉತ್ಸುಕತೆ ಇದೆ ಎಂದರು. ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಜಪಾನ್ ಪ್ರವಾಸ ಕೈಗೊಂಡಾಗ ಮಾಡಿಕೊಳ್ಳಲಾದ ಒಪ್ಪಂದಗಳ ಅನುಷ್ಠಾನ ಕುರಿತು ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಾರೊ ಕೊನೊ ತಿಳಿಸಿದರು.