ಇಂದು ಸಂಜೆ ಪುಣೆಯಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಎರಡನೇ ಆವೃತ್ತಿಗೆ ಚಾಲನೆ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಎರಡನೇ ಆವೃತ್ತಿ ಇಂದಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ಅಧಿಕೃತವಾಗಿ ಆರಂಭಗೊಳ್ಳಲಿದೆ. ಇಂದು ಸಂಜೆ ಶ್ರೀ ಶಿವ್ ಛತ್ರಪತಿ ಕ್ರೀಡಾಂಗಣದಲ್ಲಿ ಜರುಗಲಿರುವ ವರ್ಣರಂಜಿತ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ವಿವಿಧ ರಾಜ್ಯಗಳ ಸುಮಾರು ೯ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ೧೮ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ವೇಟ್ ಲಿಫ್ಟರ್ ಜೆರೇಮಿ ಲಬ್ರಿನುಂಗಾ ಯುವ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ. ಹತ್ತು ವರ್ಷ ವಯಸ್ಸಿನ ಮೂವರು ಅಥ್ಲೀಟ್ ಗಳಾದ ಜಾರ್ಖಂಡನ ಫುಟ್ ಬಾಲ್ ಪಟು ಪ್ರತಿಮಾ ಕುಮಾರ್, ಮಿಜೋರಾಂನ ಹಾಕಿಪಟು ಲಲ್ತಾನ್ ಚುಂಗಿ ಮತ್ತು ಪಶ್ವಿಮ ಬಂಗಾಳದ ೧೦ ಮೀಟರ್ ಏರ್ ರೈಫಲ್ ಶೂಟರ್ ಆಭಿನವ್ ಈ ಮೂವರು ಮೊದಲ ಬಾರಿಗೆ ಬೃಹತ್ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೋಮವಾರದಿಂದಲೇ ಮುಂಬೈನಲ್ಲಿ ಬಾಲಕರ ಹಾಕಿ ಕ್ರೀಡೆ ಪ್ರಾರಂಭವಾಗಿದೆ.