ರಾಮಜನ್ಮಭೂಮಿ – ಬಾಬ್ರಿ ಮಸೀದಿ ಜಮೀನಿನ ಮಾಲಿಕತ್ವದ ವಿವಾದ ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಈ ಪೀಠದಲ್ಲಿ, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಎನ್.ವಿ. ರಮಣ, ಯು.ಯು. ಲಲಿತ್ ಮತ್ತು ಡಿವೈ. ಚಂದ್ರಚೂಢ್ ಅವರಿದ್ದಾರೆ. ಈ ಸಾಂವಿಧಾನಪೀಠವು, ನಾಳೆಯಿಂದ ಪ್ರಕರಣದ ವಿಚಾರಣೆ ನಡೆಸಲಿದೆ.