ಮುದ್ರಣ ಮಾಧ್ಯಮಗಳ ಜಾಹೀರಾತು ದರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶೇಕಡ ೨೫ರಷ್ಟು ಏರಿಕೆ ಮಾಡಿದೆ. ನೂತನ ದರ ಮುಂದಿನ ೩ ವರ್ಷಗಳ ಕಾಲ ಜಾರಿಯಲ್ಲಿರಲಿದೆ. ೮ನೇ ದರ ನಿರ್ಣಯ ಸಮಿತಿ ಶಿಫಾರಸು ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ದರ ಏರಿಕೆಯಿಂದಾಗಿ ಮಧ್ಯಮ ಮತ್ತು ಸಣ್ಣ ಪತ್ರಿಕೆಗಳು ಹಾಗೂ ಪ್ರಾದೇಶಿಕ ಭಾಷಾ ಪತ್ರಿಕೆಗಳಿಗೆ ಅನುಕೂಲವಾಗಿದೆ. ಈ ಮುನ್ನ ೨೦೧೩ರಲ್ಲಿ ಜಾಹೀರಾತು ದರ ಏರಿಕೆ ಮಾಡಲಾಗಿತ್ತು.