೫೮ ಕಿಲೋ ಮೀಟರ್ ಉದ್ದದ ಸೋಲಾಪುರ – ತುಳಜಾಪುರ – ಉಸ್ಮಾನಾಬಾದ್ ವಲಯದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ೨೧೧ನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ೫೮ ಕಿಲೋ ಮೀಟರ್‌ಗಳ ಸೋಲಾಪುರ – ತುಳಜಾಪುರ – ಉಸ್ಮಾನಾಬಾದ್ ವಲಯದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ೨೧೧ನ್ನು ದೇಶಕ್ಕೆ ಸಮರ್ಪಿಸಿದರು. ಸೋಲಾಪುರ- ಯಡಾಸಿ ವಿಭಾಗದ ನಡುವಿನ ೯೮ ಕಿಲೋ ಮೀಟರ್ ಗಳ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಯೋಜನೆಯ ಭಾಗವಾಗಿದ್ದು, ೯೭೨ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಮಹಾರಾಷ್ಟ್ರದ ಮರಾಠವಾಡ ವಲಯದೊಂದಿಗೆ ಸೋಲಾಪುರದ ಸಂಪರ್ಕವನ್ನು ಸುಧಾರಿಸಲಿದೆ. ಪ್ರಧಾನಮಂತ್ರಿಯವರು ಈ ಯೋಜನೆಗೆ ೨೦೧೪ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.