ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಮೊದಲ ದಿನ ೫ ಚಿನ್ನ ಗಳಿಸಿದ ದೆಹಲಿ.

ಪುಣೆಯ ಶಿವ್‌ಛತ್ರಪತಿ ಕ್ರೀಡಾಂಗಣದಲ್ಲಿ ನಿನ್ನೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಂದ ಚಾಲನೆಗೊಂಡ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟದ ಮೊದಲ ದಿನವಾದ ಇಂದು ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ದೆಹಲಿ, ಮೊದಲ ದಿನವೇ ೫ ಚಿನ್ನದ ಪದಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಮಹಾರಾಷ್ಟ್ರ ೩ ಮತ್ತು ಹರಿಯಾಣ ೨ ಚಿನ್ನದ ಪದಕಗಳನ್ನು ಪಡೆದಿದೆ. ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ ತಲಾ ಒಂದೊಂದು ಚಿನ್ನದ ಪದಕ ಪಡೆದಿವೆ.