ಖೇಲೋ ಇಂಡಿಯಾ ಯುವ ಕ್ರೀಡಾಕೂಟ: ಪುಣೆಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ೨ನೇ ದಿನದ ಅಂತ್ಯಕ್ಕೆ ೧೫ ಚಿನ್ನ ಸೇರಿ ೫೭ ಪದಕ ಗಳಿಸಿ ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ೨ನೇ ದಿನದ ಅಂತ್ಯಕ್ಕೆ ಮಹಾರಾಷ್ಟ್ರ ೧೫ ಚಿನ್ನ ಸೇರಿ ೫೭ ಪದಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿತ್ತು.

೧೧ ಚಿನ್ನದ ಪದಕಗಳನ್ನು ನಿನ್ನೆಯೇ ಗೆದ್ದುಕೊಳ್ಳಲಾಗಿದೆ. ಅವುಗಳಲ್ಲಿ ೫ ಜಿಮ್ನಾಸ್ಟಿಕ್, ೩ ಈಜು, ೨ ಅಥ್ಲೆಟಿಕ್ಸ್ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ೧ ಪದಕ ಜಯಿಸಲಾಗಿದೆ. ೧೫ ಚಿನ್ನದ ಪದಕಗಳಲ್ಲದೆ, ಮಹಾರಾಷ್ಟ್ರ ಈವರೆಗೆ ೧೯ ಬೆಳ್ಳಿ ಹಾಗೂ ೨೩ ಕಂಚಿನ ಪದಕಗಳನ್ನು ಸಹ ಗೆದ್ದಿದೆ.

ಮಾಧ್ಯಮದ ಪ್ರಕಟಣೆಯಂತೆ ದೆಹಲಿ ೧೩ ಚಿನ್ನ, ೧೦ ಬೆಳ್ಳಿ ಹಾಗೂ ೧೩ ಕಂಚಿನ ಪದಕಗಳೊಂದಿಗೆ ೨ನೇ ಸ್ಥಾನದಲ್ಲಿದೆ.

೩ನೇ ಸ್ಥಾನದಲ್ಲಿರುವ ಹರಿಯಾಣ, ೧೨ ಚಿನ್ನ, ೧೦ ಬೆಳ್ಳಿ ಹಾಗೂ ೧೮ ಕಂಚಿನ ಪದಕಗಳನ್ನು ಜಯಿಸಿದೆ. ಹರಿಯಾಣ ೧೭ ವರ್ಷದೊಳಗಿನ ಬಾಲಕಿಯರ ಕುಸ್ತಿ ಸ್ಪರ್ಧೆಯಲ್ಲಿ ಎಲ್ಲ ೭ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.