ಖೇಲೋ ಇಂಡಿಯಾ ಯುವ ಕ್ರೀಡಾಕೂಟ: ೨ನೇ ದಿನದ ಅಂತ್ಯಕ್ಕೆ ೫೭ ಪದಕಗಳೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿ

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ೨ನೇ ದಿನದ ಅಂತ್ಯಕ್ಕೆ ಮಹಾರಾಷ್ಟ್ರ ೧೫ ಚಿನ್ನ ಸೇರಿ ೫೭ ಪದಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿತ್ತು. ೧೧ ಚಿನ್ನದ ಪದಕಗಳನ್ನು ನಿನ್ನೆಯೇ ಗೆದ್ದುಕೊಳ್ಳಲಾಗಿದೆ. ಅವುಗಳಲ್ಲಿ ೫ ಜಿಮ್ನಾಸ್ಟಿಕ್, ೩ ಈಜು, ೨ ಅಥ್ಲೆಟಿಕ್ಸ್ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ೧ ಪದಕ ಜಯಿಸಲಾಗಿದೆ. ೧೫ ಚಿನ್ನದ ಪದಕಗಳಲ್ಲದೆ, ಮಹಾರಾಷ್ಟ್ರ ಈವರೆಗೆ ೧೯ ಬೆಳ್ಳಿ ಹಾಗೂ ೨೩ ಕಂಚಿನ ಪದಕಗಳನ್ನು ಸಹ ಗೆದ್ದಿದೆ.