ದಿಢೀರ್ ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಸುಗ್ರಿವಾಜ್ಞೆಯನ್ನು ಮತ್ತೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ

ದಿಢೀರ್ ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಸುಗ್ರಿವಾಜ್ಞೆಯನ್ನು ಮತ್ತೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಈ ಸುಗ್ರಿವಾಜ್ಞೆ ಎಲ್ಲ ದಿಢೀರ್ ತ್ರಿವಳಿ ತಲಾಖ್‌ಗಳನ್ನು ಅಕ್ರಮ ಎಂದು ಸಾರುವ ಜೊತೆಗೆ, ಅಂತಹ ಪದ್ದತಿಗಳನ್ನು ಪಾಲಿಸುವವರನ್ನು ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ನೀಡುವ ಅಂಶ ಒಳಗೊಂಡಿದೆ.

ಅಲ್ಲದೆ, ಭಾರತೀಯ ವೈದ್ಯಕೀಯ ಮಂಡಳಿಯನ್ನು ನಡೆಸಲು ರಚಿಸಲಾಗಿರುವ ಸಮಿತಿಯನ್ನು ಮುಂದುವರಿಸುವ ಕುರಿತಾದ ಸುಗ್ರಿವಾಜ್ಞೆಯನ್ನೂ ಸಹ ಮತ್ತೆ ಹೊರಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ