ಬಹು ಉದ್ದೇಶಿತ ರೇಣುಕಾಜಿ ಅಣೆಕಟ್ಟು ಯೋಜನೆ ಒಪ್ಪಂದಕ್ಕೆ ಆರು ರಾಜ್ಯಗಳ ಸಹಿ

ಹಿಮಾಚಲಪ್ರದೇಶದಲ್ಲಿ ಯಮುನಾ ನದಿಯ ಉಪ ನದಿಗಳಾದ ಗಿರಿ ಮತ್ತು ಟಾನ್ಸ್ ನದಿಗಳಿಗೆ ಕಟ್ಟುವ ರೇಣುಕಾಜಿ ಅಣೆಕಟ್ಟು ಬಹು ಉದ್ದೇಶಿತ ಯೋಜನೆಯ ಒಪ್ಪಂದಕ್ಕೆ ನವದೆಹಲಿಯಲ್ಲಿಂದು ಉತ್ತರ ಪ್ರದೇಶ, ಹರಿಯಾಣ, ಹಿಮಾಚಲಪ್ರದೇಶ, ದೆಹಲಿ, ರಾಜಸ್ತಾನ ಮತ್ತು ಉತ್ತರಾಖಂಡ ರಾಜ್ಯಗಳು ಸಹಿ ಹಾಕಿವೆ. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಆರು ರಾಜ್ಯಗಳ ಮುಖ್ಯಮಂತ್ರಿಗಳು ಸಹಿ ಹಾಕಿದ್ದಾರೆ. ಕುಡಿಯುವ ನೀರು ಮತ್ತು  ನೀರಾವರಿ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.