೨೦೨೧ರ ಡಿಸೆಂಬರ್ ವೇಳೆಗೆ ದೇಶದ ಮೊಟ್ಟ ಮೊದಲ ಮಾನವಸಹಿತ ಗಗನಯಾನ ಯೋಜನೆ; ಇದೇ ಏಪ್ರಿಲ್ ವೇಳೆಗೆ ಚಂದ್ರಯಾನ-೨ ಯೋಜನೆಗೆ ಹಲವು ಹಂತಗಳ ಸಿದ್ಧತೆ ಪ್ರಗತಿಯಲ್ಲಿ – ಇಸ್ರೋ ಅಧ್ಯಕ್ಷ ಕೆ. ಸಿವನ್ ಮಾಹಿತಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಉದ್ದೇಶಿತ  ಚಂದ್ರಯಾನ-೨ ಹಾಗೂ ಗಗನಯಾನ ಯೋಜನೆಗಳನ್ನು ನಿಗದಿಯಂತೆ ಕೈಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಸಿವನ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೧ರ ಅಂತ್ಯದ ವೇಳಗೆ ದೇಶದ ಮೊಟ್ಟಮೊದಲ ಮಾನವಸಹಿತ ಗಗನಯಾನ ಯೋಜನೆಗೆ ಹಲವು ಹಂತಗಳಲ್ಲಿ ಸಿದ್ಧತೆ ಪ್ರಗತಿಯಲ್ಲಿದೆ. ಚಂದ್ರಯಾನ-೨ ಯೋಜನೆ ಇದೇ ಏಪ್ರಿಲ್ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ.  ಇದಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿದೆ ಎಂದು ತಿಳಿಸಿದರು.  ಗಗನಯಾನ ಯೋಜನೆಯಲ್ಲಿ ಭಾರತದ ಗಗನಯಾತ್ರಿಯೊಬ್ಬರು ೭ ದಿನಗಳ ಕಾಲ ಅಂತರಿಕ್ಷದಲ್ಲಿ ಸಂಶೋಧನೆಗಳನ್ನು ನಡೆಸಲಿದ್ದಾರೆ ಎಂದು ಅವರು  ವಿವರಿಸಿದರು. ಇಸ್ರೋ ೨೦೧೮ರಲ್ಲಿ ಒಟ್ಟು ೧೭ ಯೋಜನೆಗಳನ್ನು ಸಂಸ್ಥೆ ಯಶಸ್ವಿಯಾಗಿ ಪೂರೈಸಿದೆ, ಸರ್ಕಾರ ಇಸ್ರೋಗೆ ಬಜೆಟ್‌ನಲ್ಲಿ ೩೦ ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ. ಎಂದು ಹೇಳಿದರು. ೨೦೧೯ನೇ ವರ್ಷಕ್ಕಾಗಿ ಒಟ್ಟು ೩೨ ಯೋಜನೆಗಳು ಪ್ರಗತಿಯಲ್ಲಿವೆ. ದೇಶದ ಆರು ಸ್ಥಳಗಳಲ್ಲಿ ಇಸ್ರೋ ಸೂಚನಾ ಕೇಂದ್ರಗಳನ್ನು ಆರಂಭಿಸಲಾಗುವುದು. ಜಮ್ಮುವಿನಲ್ಲಿ ಇಸ್ರೋ ವಿಜ್ಞಾನ ಕೇಂದ್ರವನ್ನು ಆರಂಭಿಸಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.