4ನೇ ರೈಸಿನಾ ಸಂವಾದ

ಪ್ರಧಾನಿ ನರೇಂದ್ರ ಮೋದಿ ಮತ್ತು ನಾರ್ವೆಯ ಪ್ರಧಾನಿ ಶ್ರೀಮತಿ ಎರ್ನಾ ಸೊಲ್ಬರ್ಗ್ ಅವರು ನವದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಎರಡು ದಿನಗಳ ಸಂವಾದ ಅರ್ಥಪೂರ್ಣವಾಗಿ ನಡೆಯಿತು. ಪ್ರಮುಖ ಅಂತರರಾಷ್ಟ್ರೀಯ ನೀತಿ ನಿರ್ಮಾಪಕರು, ಶಿಕ್ಷಣತಜ್ಞರು ಮತ್ತು ತಂತ್ರಜ್ಞರು ಕೂಡ ಈ ಡೈಲಾಗ್ ನಲ್ಲಿ ಭಾಗ್ವಹಿಸಿಕೊಂಡಿದ್ದರು.. ಮುಂದಿನ ಎರಡು ದಿನಗಳವರೆಗೆ ಚರ್ಚೆಗಳು ನಡೆಯಲಿವೆ. ರೈಸಿನಾ ಡೈಲಾಗ್ ಭಾರತದ ಪ್ರಮುಖ ಚಿಂತನ ಮಂಥನವಾಗಿದ್ದು, ಥಿಂಕ್ ಟ್ಯಾಂಕ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್ ಮತ್ತು ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಪ್ರಮುಖ ವಾರ್ಷಿಕ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.

ತಮ್ಮ ಭಾಷಣದಲ್ಲಿ ನಾರ್ವೆ ಪ್ರಧಾನಿ ಮಾತನಾಡಿ, ಮಂತ್ರಿಯು ಕೇವಲ ಶಕ್ತಿ ಮಾತ್ರ ನಮ್ಮ ಸಾಗರಗಳ ಆಳಲು ಆಧಾರವಾಗಿ ಇರುವುದಲ್ಲ ಎಂದರು. ಭಾರತೀಯ ವಿದೇಶಾಂಗ ವ್ಯವಹಾರಗಳ ಮಂತ್ರಿ ಶ್ರೀಮತಿ ಸುಷ್ಮಾ ಸ್ವರಾಜ್ ತಮ್ಮ ಪ್ರಧಾನ ಭಾಷಣದಲ್ಲಿ, ಭಾರತವು ಪ್ರಜಾಪ್ರಭುತ್ವ ಮತ್ತು ನಿಯಮಗಳ ಆಧಾರದ ಅಂತಾರಾಷ್ಟ್ರೀಯ ಆದೇಶವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಇದರಲ್ಲಿ ಎಲ್ಲಾ ರಾಷ್ಟ್ರಗಳು ಸಮನಾಗಿ ಬೆಳೆಯಬಹುದು. ಈ ಹೇಳಿಕೆ ದಕ್ಷಿಣ ಚೀನಾ ಸಮುದ್ರದಲ್ಲಿನ ವಿಸ್ತರಣಾ ಚಟುವಟಿಕೆಗಳಿಗೆ ಪರೋಕ್ಷ ಉಲ್ಲೇಖವೆಂದು ತೋರುತ್ತದೆ.

ರೈಸೀನಾ ಸಂವಾದವು ಜಾಗತಿಕ ಸಮುದಾಯವನ್ನು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಬಹುವಿಧದ ಸಮಾವೇಶವಾಗಿದೆ. ಈ ಡೈಲಾಗ್ ಬಹು ಮುಖ್ಯಸ್ಥ, ಬಹುಪಕ್ಷೀಯ ಚರ್ಚೆಯಾಗಿ ರಚಿಸಲ್ಪಟ್ಟಿದೆ. ಇದರಲ್ಲಿ ರಾಜ್ಯಗಳ ಮುಖ್ಯಸ್ಥರು, ಕ್ಯಾಬಿನೆಟ್ ಮಂತ್ರಿಗಳು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಮುಖ ಖಾಸಗಿ ವಲಯದ ಅಧಿಕಾರಿಗಳು ಭಾಗವಹಿಸುತ್ತಾರೆ. ಈ ಸಮ್ಮೇಳನವು ಮಲೇಷಿಯಾದ ನಾಯಕ ಅನ್ವರ್ ಇಬ್ರಾಹಿಂ ಅವರ ಮಾತುಕತೆಯ ಭಾಷಣದಲ್ಲಿ ಮುಕ್ತಾಯಗೊಂಡಿತು. ಅವರು ಈಗಿನ ಪ್ರಧಾನಮಂತ್ರಿ ಮಹಾತಿರ್ ಮೊಹಮ್ಮದ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್ಎಫ್) ಅಧ್ಯಕ್ಷರಾದ ಸುನ್ಜಾಯ್ ಜೋಷಿಯವರ ಪ್ರಕಾರ, ಹಳೆಯ ವ್ಯವಸ್ಥೆಗಳನ್ನು ಮರು ಕ್ರಮಗೊಳಿಸಲು ಮತ್ತು ಮಾನವ ಪ್ರಯತ್ನವನ್ನು ಗಟ್ಟಿಗೊಳಿಸಿ ನಿಯಮಗಳನ್ನು ಪುನಃ ಬರೆಯುವ ಅವಕಾಶವನ್ನು ಈ ಸಂವಾದ ಒದಗಿಸಿದೆ. ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷರ ಪ್ರಕಾರ, ರೈಸಿನ ಸಂವಾದದಲ್ಲಿ ಡಾ. ಸಮೀರ್ ಸರನ್ ಯುರೋಪ್ ಅಥವಾ ವಿಶಾಲವಾದ ಯುರೇಷಿಯಾದ ಮೇಲೆ ಬೆಳಕು ಚೆಲ್ಲಿದರು.

ರೈಸಿನಾ ಡೈಲಾಗ್ ನಲ್ಲಿ ಇಂಡೋ ಪೆಸಿಫಿಕ್ ವಿಷಯದ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಭಾರತೀಯ ನೌಕಾ ಸೇನೆಯ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಪ್ರತಿನಿಧಿಗಳು ಕೂಡ ಮಾತನಾಡಿದರು. ಭಾರತದ ವಿದೇಶಾಂಗ ಸೆಕ್ರೆಟರಿ ವಿಜಯ್ ಗೋಖಲೆ ಮಾತನಾಡಿ ನೆರೆಹೊರೆ ಮತ್ತು ಅದರಾಚೆಗಿನ ವಿದೇಶಾಂಗ ನೀತಿಗಳ ಸವಾಲುಗಳ ಗಮನ ಸೆಳೆದರು.

92 ಕ್ಕೂ ಹೆಚ್ಚು ರಾಷ್ಟ್ರಗಳಿಂದ 600 ಪ್ರತಿನಿಧಿಗಳು ಮತ್ತು ಭಾಷಣಕಾರರು ಸೇರಿದಂತೆ 2000 ಕ್ಕಿಂತ ಹೆಚ್ಚು ಮಂದಿ ಈ ವರ್ಷದ ರೈಸಿನ ಸಂಭಾಷಣೆಯಲ್ಲಿ ಪಾಲ್ಗೊಂಡರು. ORF ಸುಂಜಯ್ ಜೋಷಿಯ ಪ್ರಕಾರ, ಮೂರು ದಿನಗಳ ಒಳನೋಟವುಳ್ಳ ಚರ್ಚೆಗಳು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತು.

ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಮಾಜಿ-ಇಟಾಲಿಯನ್ ಪ್ರೀಮಿಯರ್ ಪಾವೊಲೊ ಗೆಟಿಲೋನಿ, ಮಾಜಿ ಕೆನಡಿಯನ್ ಪ್ರಧಾನ ಮಂತ್ರಿ ಸ್ಟೀಫನ್ ಹಾರ್ಪರ್, ಸ್ವೀಡನ್ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ ಮತ್ತು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಇರಾನ್, ಆಸ್ಟ್ರೇಲಿಯಾ, ಸ್ಪೇನ್, ಮಂಗೋಲಿಯಾ, ನೇಪಾಳದ ಪ್ರತಿನಿಧಿಗಳು ಮೂರು ದಿನಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಸಿಂಗಪುರದಲ್ಲಿ ಪ್ರತಿ ವರ್ಷ ನಡೆಯುವ ಶಾಂಗ್ರಿಲಾ ಸಂವಾದದ ಬಳಿಕ ಏಷ್ಯಾದಲ್ಲಿನ ಮತ್ತೊಂದು ಪ್ರತಿಷ್ಠಿತ ಸಭೆಯಾಗಿ ಈ ರೈಸಿನ ಸಂಭಾಷಣೆ ಹೊರಹೊಮ್ಮಿದೆ. ಅಲ್ಲಿ ವಿವಿಧ ರಾಷ್ಟ್ರಗಳ ಉನ್ನತ ನೀತಿ ತಯಾರಕರು ತಮ್ಮ ಸರ್ಕಾರಗಳ ರಾಷ್ಟ್ರೀಯ ನೀತಿಗಳನ್ನು ಪ್ರಸ್ತುತ ಪಡಿಸುತ್ತಾರೆ. ಕಳೆದ ವರ್ಷ ಶಾಂಗ್ರಿಲಾ ಸಂಭಾಷಣೆಯಲ್ಲಿ ಭಾರತದ ಪ್ರಧಾನಿ ಮುಖ್ಯ ಅತಿಥಿಯಾಗಿದ್ದರು, ಅಲ್ಲಿ ಅವರು ಎಲ್ಲವನ್ನೊಳಗೊಂಡ ಇಂಡೋ-ಪೆಸಿಫಿಕ್ ಬಗ್ಗೆ ತಮ್ಮ ಭಾಷಣ ಮಾಡಿದರು. ರೈಸೀನಾ ಸಂಭಾಷಣೆಯ ಸಮಯದಲ್ಲಿ ಈ ಥೀಮ್ ಅನ್ನು ಮುಂದುವರಿಸಲಾಯಿತು.

ಭಾರತೀಯ ವಿದೇಶಾಂಗ ವ್ಯವಹಾರಗಳ ಮಂತ್ರಿಯು 2019 ರಲ್ಲಿ ನರೇಂದ್ರ ಮೋದಿ ಸರಕಾರ ಮತ್ತು ಭವಿಷ್ಯದ ನಿರ್ದೇಶನಗಳ ವಿದೇಶಾಂಗ ನೀತಿಯ ದೃಷ್ಟಿಕೋನವನ್ನು ಮುಂದಿಟ್ಟರು. ಯುಎಸ್-ಜಪಾನ್-ಆಸ್ಟ್ರೇಲಿಯಾ ಗುಂಪು ಮತ್ತು ರಶಿಯಾ-ಚೀನಾ ಗುಂಪುಗಳ ಧ್ರುವೀಕರಣದ ಈ ಕಾಲಘಟ್ಟದಲ್ಲಿ, ಎರಡೂ ಗುಂಪುಗಳು ಭಾರತವನ್ನು ಹುಡುಕುತ್ತಿದ್ದಾರೆ. ಈ ಸನ್ನಿವೇಶದಲ್ಲಿ, ಶ್ರೀಮತಿ ಸ್ವರಾಜ್ ಭಾರತದ ಜಾಗತಿಕ ತೊಡಗುವಿಕೆಗಳ ಸಮಗ್ರತೆ ಕುರಿತು ಮಾತನಾಡಿದರು.

ಲೇಖನ: ರಂಜಿತ್ ಕುಮಾರ್, ರಾಜತಾಂತ್ರಿಕ ಸಂಪಾದಕರು, ನವೋದಯ ಟೈಮ್ಸ್