ಏಕರೂಪದ ವರಮಾನ ಯೋಜನೆ: ಭಾರತದಲ್ಲಿ ಪ್ರಯೋಗ

ಯುನಿವರ್ಸಲ್ ಬೇಸಿಕ್ ಇನ್ಕಮ್ (ಯುಬಿಐ) ಅನ್ನು ತರುವಲ್ಲಿ ಆರ್ಥಿಕ ಪ್ರಯೋಗಗಳಿಗೆ ಭಾರತವು ವೇದಿಕೆಯಾಗಬಹುದು. ಆ ಮೂಲಕ ಮುಂಬರುವ ವರ್ಷಗಳಲ್ಲಿ ಅದರ ಕೆಲವು ಅಥವಾ ಎಲ್ಲಾ ನಾಗರಿಕರಿಗೆ ನೆರವಾಗಬಹುದು. ಯುಬಿಐ ಮೂಲಭೂತ ವರಮಾನವು ಕಲ್ಯಾಣಕ್ಕೆ ಪೂರಕವಾಗಿದೆ. ಅಲ್ಲಿ ಎಲ್ಲ ನಾಗರಿಕರಿಗೆ ರಾಜ್ಯವು ಕನಿಷ್ಟ ಸಬ್ಸಿಡಿಯನ್ನು ಕೊಡುತ್ತದೆ, ಇದನ್ನು ಮೊದಲು ಬ್ರಿಟಿಷ್ ಚಿಂತಕ ಸರ್ ಥಾಮಸ್ ಮೂರ್ ಮೊದಲು ಪ್ರಸ್ತಾಪಿಸದ್ದರು ಮತ್ತು ನಂತರದಲ್ಲಿ ಅಮೆರಿಕಾದ ಕ್ರಾಂತಿಕಾರಕ ಮತ್ತು ಚಿಂತಕ ಥಾಮಸ್ ಪೈನ್ ಅವರು ಜನಪ್ರಿಯಗೊಳಿಸಿದರು.
 
ಭಾರತದಲ್ಲಿ, ದಕ್ಷಿಣದ ತೆಲಂಗಾಣ ರಾಜ್ಯ, ಕಳೆದ ವರ್ಷ `ರೈತು ಬಂಧು ‘(ಫಾರ್ಮರ್ ಫ್ರೆಂಡ್) ಯೋಜನೆಯನ್ನು ಘೋಷಿಸಿತು. ತಮ್ಮ ಸ್ವಾಮ್ಯದ ಕೃಷಿ ಭೂಮಿಗೆ ಅನುಗುಣವಾಗಿ ಎಲ್ಲಾ ರೈತರಿಗೆ ಸ್ಥಿರ ಆದಾಯವನ್ನು ನೀಡುವ ಯೋಜನೆ ಇದೆ ಎಂದು ಹೇಳಲಾಯಿತು. ಸಿಕ್ಕಿಂ ರಾಜ್ಯವು ಈಗ ಎಲ್ಲಾ 600,000 ನಾಗರಿಕರಿಗೆ ಯುನಿವರ್ಸಲ್ ಬೇಸಿಕ್ ಆದಾಯವನ್ನು, ಎಲ್ಲಾ ಕುಟುಂಬಗಳಿಗೆ ಕನಿಷ್ಠ ಆದಾಯವನ್ನು ನೀಡುವ ಮತ್ತು ಇತರ ರಾಜ್ಯಗಳಲ್ಲಿನ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಕ್ರಮವಾಗಿ ಇಂಥದ್ದೊಂದು ಭರವಸೆ ನೀಡಿದೆ. ಕರಾವಳಿ ರಾಜ್ಯ ಒಡಿಶಾ ಬಡ ರೈತರಿಗೆ ಇದೇ ರೀತಿಯ ಮೂಲಭೂತ ಆದಾಯ ಸೂತ್ರದ ಭರವಸೆ ನೀಡಿದೆ. ಇದರಿಂದಾಗಿ, ಕಲ್ಯಾಣ ಮಾಪನವನ್ನು ರಾಜ್ಯದ ನೀತಿಯ ಸಾಧನವಾಗಿ ಅಳವಡಿಸಿಕೊಳ್ಳುವ ಮೂರನೇ ರಾಜ್ಯವಾಗಿದೆ.
 
ಭಾರತದ ಎಲ್ಲ 1.3 ಶತಕೋಟಿ ಜನರಿಗೆ ಇದೇ ಕ್ರಮ ಜಾರಿ ಮಾಡುವುದರಿಂದ ಪ್ರಸಕ್ತ ಹಂತದಲ್ಲಿ ಇದನ್ನು ನಿಭಾಯಿಸುವುದು ಭಾರೀ ದೊಡ್ಡ ಸವಾಲಾಗಿ ಪರಿಣಮಿಸಲಿದೆ.. ವರ್ಷದ ಏಪ್ರಿಲ್-ಮೇನಲ್ಲಿ ಸಾರ್ವತ್ರಿಕ ಚುನಾವಣೆಗಳಿರುವುದರಿಂದ  ಯುನಿವರ್ಸಲ್ ಬೇಸಿಕ್ ಇನ್ಕಮ್ ಯೋಜನೆಯನ್ನುಈಗ ಜಾರಿ ಮಾಡುವುದನ್ನು ವಿರೋಧ ಪಕ್ಷಗಳು ವಿರೋಧಿಸಿವೆ. 
 
ಯುನಿವರ್ಸಲ್ ಬೇಸಿಕ್ ಇನ್ಕಮ್ ಕಲ್ಪನೆಯು ಅರ್ಥಶಾಸ್ತ್ರಜ್ಞ ಅರವಿಂದ ಸುಬ್ರಹ್ಮಣ್ಯನ್ ಅವರ ಆರ್ಥಿಕ ಸಮೀಕ್ಷೆ 2016-17ರಲ್ಲಿ ಮೊದಲ ಬಾರಿಗೆ ಗಂಭೀರವಾಗಿ ಚರ್ಚಿಸಲ್ಪಟ್ಟಿತ್ತು. ಕೇಂದ್ರ ಸರ್ಕಾರ ಹಣಕಾಸು ಸಮೀಕ್ಷೆಯಲ್ಲಿ ತನ್ನ ಬಜೆಟ್ ಭವಿಷ್ಯದ ಆರ್ಥಿಕ ಸವಾಲುಗಳು ಮತ್ತು ಸಾಧನೆಗಳು ಮತ್ತು ಭವಿಷ್ಯದ ಕಲ್ಪನೆಗಳನ್ನು ವಿವರಿಸುತ್ತದೆ. ಆ ಸಮೀಕ್ಷೆಯಲ್ಲಿ, ಯುನಿವರ್ಸಲ್ ಬೇಸಿಕ್ ಇನ್ಕಮ್ ಅಥವಾ ಪ್ರತಿ ವಯಸ್ಕ ಮತ್ತು ಮಗು, ಬಡವರು ಅಥವಾ ಶ್ರೀಮಂತರಿಗೆ ಪಾವತಿಸಲಾಗುವ ಏಕರೂಪದ ವೇತನದ ಬಗ್ಗೆ ಸಲಹೆ ನೀಡುವ ಸಾಧ್ಯತೆ ಇದೆ.  
 
ಸಿಕ್ಕಿಂ, ತೆಲಂಗಾಣ, ಒಡಿಶಾ ಸೇರಿದಂತೆ ಎಲ್ಲರಿಗೂ ಹೊಸದಾದ ಗ್ರಾಮೀಣ ಆದಾಯ ಪ್ರಸ್ತಾವವನ್ನು ನಾವು ಮುಂದಿಡಲಿದ್ದೇವೆ. ಏಕರೂಪದ ಸಾಮಾನ್ಯ ಆದಾಯ ಎಂಬುದು ನಮ್ಮ ಚಿಂತನೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯನ್‌ ಈಚೆಗೆ ಟ್ವೀಟ್‌ ಮಾಡಿದ್ದರು. 
 
ಸುಬ್ರಹ್ಮಣ್ಯನ್‌ ಅವರು ತಮ್ಮ ಕ್ವಾಸಿ ಯುನಿವರ್ಸಲ್‌ ಬೇಸಿಕ್‌ ರುರಲ್‌ ಇನ್ಕಮ್:‌ ದ ವೇ ಫಾರ್ವರ್ಡ್‌ ಎಂದ ಬರಹದಲ್ಲಿ ಎಲ್ಲಾ ಬಡ ಕುಟುಂಬಗಳಿಗೆ ರೂ. ೧೫೦೦ ಸಾಮಾನ್ಯ ಆದಾಯ ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು. 
 
ಇಂಥದ್ದೊಂದು ಕ್ರಮವನ್ನು ಯೋಚಿಸುವ ಮೊದಲ ದೇಶ ಭಾರತವೇನಲ್ಲ. ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳು ಈ ಪರಿಕಲ್ಪನೆಯನ್ನು ಪ್ರಯೋಗಿಸಿವೆ. ಹಾಸ್ಯನಟ ಬೇಪೆ ಗ್ರಿಲ್ಲೊ ನೇತೃತ್ವದ ಇಟಾಲಿಯನ್ ಚಳವಳಿಯು, “ನಾಗರಿಕರ ಆದಾಯ” ಎಂಬ ಕಲ್ಪನೆಯೊಂದಿಗೆ “ಸಾರ್ವತ್ರಿಕ ಮೂಲ ಆದಾಯ” ಇಟಲಿಯ ಕುಟುಂಬಗಳಿಗೆ 9,360 ಯೂರೋಗಳಿಗಿಂತಲೂ ಕಡಿಮೆ ಆದಾಯವನ್ನು ಗಳಿಸುವಂತೆ ಮಾಡಿದೆ.  
 
ಮೂರು ವರ್ಷಗಳ ಹಿಂದೆ ಫಿನ್‌ ಲ್ಯಾಂಡ್ ಈ ಪ್ರಯೋಗವನ್ನು ಮಾಡಿತು. ಆದರೆ ಕಳೆದ ವರ್ಷ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ ಎಂದು ಕೈಬಿಟ್ಟಿತು. ಉನ್ನತ ಮಟ್ಟದ ಉಚಿತ ಶಿಕ್ಷಣ, ಆರೋಗ್ಯ ಸೇವೆ, ಗೃಹ ನೆರವು ಹಾಗೂ ನಿರೂದ್ಯೋಗ ಭತ್ಯೆಗಳನ್ನು ನೀಡುತ್ತಿದ್ದುದರಿಂದ ಫಿನ್‌ ಲ್ಯಾಂಡ್‌ ನಲ್ಲಿ ಯುನಿವರ್ಸಲ್‌ ಬೇಸಿಕ್‌ ಇನ್ಕಮ್‌ ಯೋಜನೆಗೆ ಹೆಚ್ಚು ಮಹತ್ವ ಸಿಗಲಿಲ್ಲ.  
 
1960 ರ ದಶಕದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾವು ಕಲ್ಯಾಣ ಕ್ರಮಗಳ ಮೇಲೆ ತೀವ್ರವಾದ ಚರ್ಚೆಗಳನ್ನು ಕಂಡವು. ಇತರ ವಿಷಯಗಳ ನಡುವೆ, ಮೂಲಭೂತ ವರಮಾನವನ್ನು ಚರ್ಚಿಸಲಾಯಿತು ಮತ್ತು ಅದು ಸಾಕಷ್ಟು ಜನಪ್ರಿಯವಾಯಿತು. ಅಂದಿನ ಯು.ಎಸ್. ಅಧ್ಯಕ್ಷ ರಿಚರ್ಡ್ ನಿಕ್ಸನ್ 1969 ರಲ್ಲಿ ಯು.ಎಸ್. ಕಾಂಗ್ರೆಸ್ ಮುಂದೆ ನಕಾರಾತ್ಮಕ ಆದಾಯ ತೆರಿಗೆ ಮಸೂದೆಯನ್ನು ಪ್ರಸ್ತಾಪಿಸಿದರು. ಬಡ ನಾಗರಿಕರಿಗೆ ಮಾಸಿಕ ಸಬ್ಸಿಡಿಯಾಗಿ ವರ್ಷಕ್ಕೆ $ 1,600 ಹಣವನ್ನು ಖಾತರಿಪಡಿಸಿತು.  
 
ವ್ಯಕ್ತಿಯ ಕೆಲಸ ಮಾಡಬೇಕೆಂಬ ಮನಸ್ಥಿತಿ ಮೇಲೆ ಯುಬಿಐ ಪರಿಣಾಮ ಬೀರಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಅಲ್ಲದೆ ಇದು ಅಮೆರಿಕ ಸರ್ಕಾರಕ್ಕೆ ದುಬಾರಿಯಾಗಿಯೂ ಪರಿಣಮಿಸಲಿಲ್ಲ.  
 
ಯುಬಿಐ ಅನೇಕ ಅನುಕೂಲಗಳನ್ನು ಹೊಂದಿದ್ದರೂ ಹಲವು ಸವಾಲುಗಳಿರುವುದು ಮಾತ್ರ ನಿಜ. ಪಾರದರ್ಶಕ ಮತ್ತು ಸುರಕ್ಷ ಹಣಕಾಸು ವ್ಯವಸ್ಥೆಯು ಕೂಡ ಇದಕ್ಕೆ ಅತ್ಯವಶ್ಯಕ. ಇದರ ಯಶಸ್ಸು ಸಮರ್ಪಕ ವಿತರಣೆ ವ್ಯವಸ್ಥೆ ಮೇಲೆ ಅವಲಂಬಿತವಾಗಿದ. 

ಲೇಖನ : ಜಯಂತ್‌ ರಾಯ್‌ ಚೌಧುರಿ, ಬಿಸ್ನೆಸ್‌ ಎಡಿಟರ್‌, ದ ಟೆಲಿಗ್ರಾಫ್‌