ವಂಸತ್ ಪಂಚಮಿ ಅಂಗವಾಗಿ ಪ್ರಯಾಗ್‌ರಾಜ್‌ನ ಕುಂಭದಲ್ಲಿ ೩ನೇ ಮತ್ತು ಅಂತಿಮ ಶಾಹಿಸ್ನಾನದಲ್ಲಿ ಲಕ್ಷಾಂತರ ಜನರು ಭಾಗಿ; ರಾಷ್ಟ್ರಪತಿ, ಪ್ರಧಾನಮಂತ್ರಿಯಿಂದ ದೇಶದ ಜನರಿಗೆ ಶುಭಾಶಯ

ವಸಂತ ಪಂಚಮಿಯನ್ನು ಇಂದು ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿಯ ಸರಸ್ವತಿ ಪೂಜೆಯನ್ನು ಇಂದು ನೆರವೇರಿಸಲಾಗುತ್ತದೆ. ಈ ದಿನದ ಅಂಗವಾಗಿ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಲಾಗುತ್ತದೆ. ಬಿಳಿ ಮತ್ತು ಹಳದಿ ಹೂಗಳಿಂದ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ವಸಂತ ಪಂಚಮಿ ಅಂಗವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಇಂದು ನಡೆಯಲಿರುವ ಕುಂಭಮೇಳದ ೩ನೇ ಹಾಗೂ  ಕೊನೆಯ ಪುಣ್ಯಸ್ನಾನದ ಅಂಗವಾಗಿ ಇಂದು ಬೆಳಗ್ಗೆ ಲಕ್ಷಾಂತರ ಭಕ್ತಾಧಿಗಳು ಪುಣ್ಯ ಸ್ನಾನ ಮಾಡಿದರು. ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸಾಧು ಸಂತರು ಮತ್ತು ಅಪಾರ ಭಕ್ತರು ಪುಣ್ಯಸ್ನಾನ ಕೈಗೊಳ್ಳಲಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾಗಿರುವ ಪ್ರಯಾಗ್ ರಾಜ್ ಭಾರತೀಯರ ಪವಿತ್ರ ತಾಣವಾಗಿದೆ. ಇಂದಿನ ವಸಂತ ಪಂಚಮಿಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಶುಭ ಕೋರಿದ್ದಾರೆ.