ಗ್ರೇಟರ್ ನೊಯ್ಡಾದಲ್ಲಿಂದು ೧೩ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮ್ಮೇಳನ-ಪೆಟ್ರೋಟೆಕ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿಂದು ೧೩ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮ್ಮೇಳನ – ಪೆಟ್ರೋಟೆಕ್ -೨೦೧೯ಕ್ಕೆ  ಅಧಿಕೃತ ಚಾಲನೆ ನೀಡಲಿದ್ದಾರೆ.

೩ ದಿನಗಳ ದೈವಾರ್ಷಿಕ ಈ ಸಮ್ಮೇಳನ ಇಂಡೊ ಎಕ್ಸ್ ಪೋ ಮಾರ್ಟ್ ನಲ್ಲಿ ನಿನ್ನೆ ಆರಂಭಗೊಂಡಿದೆ. ಪಾಲುದಾರಿಕೆ ದೇಶಗಳ ಸುಮಾರು ೯೫ ಇಂಧನ ಸಚಿವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇಶದ ತೈಲ ಮತ್ತು ಅನಿಲ ವಲಯವು ಇತ್ತೀಚಿನ ಮಾರುಕಟ್ಟೆ ಮತ್ತು ಹೂಡಿಕೆ ಸೌಹಾರ್ದ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಲಿದೆ.

ತಂತ್ರಜ್ಞರು, ವಿಜ್ಞಾನಿಗಳು, ಕಾನೂನು ನಿರೂಪಕರು, ನಿರ್ವಹಣಾ ತಜ್ಞರು, ಉದ್ಯಮಿಗಳು, ನವೋದ್ಯಮ ಕಂಪೆನಿಗಳ ಉದ್ಯಮಿಗಳು ಸೇರಿದಂತೆ ಸುಮಾರು ೭೦ ದೇಶಗಳ  ಅಂದಾಜು ೮೬ ತಜ್ಞ ವಾಗ್ಮಿಗಳು ಮತ್ತು ೭ ಸಾವಿರ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಹಲವು ನವೋದ್ಯಮ ಕಂಪನಿಗಳು ತಮ್ಮ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕುರಿತು ಪೆಟ್ರೋಟೆಕ್ ನಲ್ಲಿ ಪ್ರದರ್ಶಿಸಲಿದ್ದಾರೆ.

ಪೆಟ್ರೋಟೆಕ್‌ಗೆ ಆಗಮಿಸುವ ಎಲ್ಲರಿಗೆ ಸ್ವಾಗತ ಕೋರಿರುವ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಭಾರತ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿರುವ ಜಗತ್ತಿನ ಅತಿದೊಡ್ಡ ಮೂರನೇ ರಾಷ್ಟ್ರವಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೆ ಇಂಧನ ಒದಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ. ಜತೆಗೆ ಸುಸ್ಥಿರ ಮತ್ತು ಸುರಕ್ಷಿತ ಇಂಧನ ಬಳಕೆ ಈ ಸಮ್ಮೇಳನದ ಘೋಷವಾಕ್ಯವಾಗಿದೆ ಎಂದು ಅವರು ಹೇಳಿದ್ದಾರೆ.