ಮೇಘಾಲಯದ ಶಿಲ್ಲಾಂಗ್‌ನಲ್ಲಿ ಇಂದೂ ಸಹ ಸಿಬಿಐ ಕಚೇರಿಯಲ್ಲಿ ಮುಂದುವರಿದ ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್‌ಕುಮಾರ್ ವಿಚಾರಣೆ

ಮೇಘಾಲಯದ ಶಿಲ್ಲಾಂಗ್‌ನಲ್ಲಿ ೩ನೇ ದಿನವಾದ ಇಂದೂ ಸಹ ಸಿಬಿಐ ಕಚೇರಿಯಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್‌ಕುಮಾರ್ ವಿಚಾರಣೆ ಮುಂದುವರೆಯಲಿದೆ.

ನಿನ್ನೆ ಸುಮಾರು ೮ ತಾಸು ರಾಜೀವ್‌ಕುಮಾರ್ ಅವರನ್ನು ಪ್ರಶ್ನಿಸಲಾಗಿತ್ತು. ಶಾರದಾ ಚಿಟ್‌ಫಂಡ್ ಹಗರಣ ಕುರಿತಂತೆ ಎಸ್.ಪಿ.ಗಳಾದ ಜಗರೂಪ್ ಸಿಂಹ, ಪಿ.ಕೆ. ಕಲ್ಯಾಣ್, ಪಾರ್ಥ ಮುಖರ್ಜಿ ಹಾಗೂ ಡಿ.ಎಸ್.ಪಿ ಟಿ.ಬರ್ದನ್ ಅವರನ್ನೊಳಗೊಂಡ ಸಿಬಿಐ ತಂಡ ಕೋಲ್ಕತಾ ಪೊಲೀಸ್ ಆಯುಕ್ತರನ್ನು ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ, ಹಗರಣದ ಮತ್ತೊಬ್ಬ ಆರೋಪಿಯಾದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ತೃಣಮೂಲ ಕಾಂಗ್ರೆಸ್ ಮುಖಂಡ ಕುನಾಲ್ ಘೋಷ್ ಸಹ ವಿಚಾರಣೆಗೆ ಸಿಬಿಐ ಕಚೇರಿಯಲ್ಲಿ ಹಾಜರಾದರು.