ದ-ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದಿನಿಂದ ಕುಲಭೂಷಣ್ ಜಾಧವ್ ಪ್ರಕರಣದ ಮುಕ್ತ ವಿಚಾರಣೆ ಆರಂಭ

ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಸೇನಾಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯವು ನೆದರ್‌ಲೆಂಡ್ಸ್‌ನ  ದಿ ಹೇಗ್‌ನಲ್ಲಿ ಇಂದಿನಿಂದ ಸಾರ್ವಜನಿಕ ವಿಚಾರಣೆ ಆರಂಭಿಸಲಿದೆ.

೪ ದಿನಗಳ ವಿಚಾರಣೆ ವೇಳೆ ಭಾರತ ಮತ್ತು ಪಾಕಿಸ್ತಾನ ತಮ್ಮ ವಾದಗಳನ್ನು ಮಂಡಿಸಲಿವೆ. ಭಾರತೀಯ ನೌಕಾಪಡೆ ಅಧಿಕಾರಿ ೪೮ ವರ್ಷದ ಕುಲಭೂಷಣ್ ಜಾಧವ್ ವಿರುದ್ಧ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನ ೨೦೧೭ರ  ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಿತ್ತು. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಧವ್ ವಿರುದ್ಧದ ಮರಣದಂಡನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ೧೦ ಸದಸ್ಯರ ಪೀಠ ತಡೆವೊಡ್ಡಿತ್ತು. ವಿಚಾರಣೆಯಲ್ಲಿ ಇಂದು ಭಾರತದ ಪರ ಹರೀಶ್ ಸಾಳ್ವೆ  ವಾದ ಮಂಡಿಸಲಿದ್ದಾರೆ. ಪಾಕಿಸ್ತಾನ ಪರ ಖವಾರ್ ಖುರೇಷಿ ನಾಳೆ ವಾದ ಮಂಡಿಸಲಿದ್ದಾರೆ.