ಲೋಕಸಭಾ ಚುನಾವಣೆಗಾಗಿ ನಾಗರಿಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು – ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ.

ಸಾರ್ವಜನಿಕರು ತಮ್ಮನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ತಮ್ಮ ಜೀವನದಲ್ಲಿ ಮತದಾರ ಚೀಟಿಗೆ ಹೆಮ್ಮೆಯ ಸ್ಥಾನ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಕುರಿತಂತೆ ಬ್ಲಾಗ್‌ನಲ್ಲಿ ಬರೆದಿರುವ ಪ್ರಧಾನಮಂತ್ರಿ ಮೋದಿ ಅವರು, ಮತದಾರ ಪಟ್ಟಿ ಸೇರ್ಪಡೆಗೆ ಜನರು ತಿತಿತಿ.ಟಿvsಠಿ.iಟಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಮತಗಟ್ಟೆಗಳಿಗೆ ತೆರಳಿ, ಇಲ್ಲವೆ ಚುನಾವಣಾ ನೋಂದಣಿ ಕಚೇರಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಬೇಕು, ಮತ್ತೆ ಮತ್ತೆ ಮತದಾರ ಪಟ್ಟಿಯನ್ನು ಅವಲೋಕಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಕುಟುಂಬದವರು, ಸ್ನೇಹಿತರು ಮತ್ತು ಬಂಧುಗಳು ಹಾಗೂ ಸಹೋದ್ಯೋಗಿಗಳು ಮತದಾನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಬೇಕು ಎಂದು ಪ್ರಧಾನಿ ಕೋರಿದ್ದಾರೆ. ಮತದಾನದ ದಿನ ಹೆಚ್ಚು ಉತ್ಸುಕರಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ೨೦೧೯ರ ಚುನಾವಣೆ ವಿಶೇಷವಾಗಿದ್ದು, ೨೧ನೇ ಶತಮಾನದಲ್ಲಿ ಜನಿಸಿದವರಿಗೆ ಮೊಟ್ಟ ಮೊದಲು ಮತದಾನ ಹಕ್ಕು ಚಲಾಯಿಸುವ ಅವಕಾಶ ದೊರೆಯುತ್ತಿದೆ, ಎಲ್ಲ ಯುವ ಮತದಾರರು ತಪ್ಪದೆ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಸಂಪದ್ಭರಿತಗೊಳಿಸಬೇಕೆಂದು ನರೇಂದ್ರ ಮೋದಿ ಹೇಳಿದ್ದಾರೆ. ಮತದಾರ ಚೀಟಿ ಪಡೆದ ನಂತರ ಮತ್ತು ಮತಹಕ್ಕು ಚಲಾಯಿಸುವ ವಾತಾವರಣವನ್ನು ನಿರ್ಮಿಸಬೇಕು, ಚುನಾವಣೆ ಎನ್ನುವುದು ಒಂದು ಹಬ್ಬ ಎನ್ನುವಂತೆ ಸಂಭ್ರಮ ಪಡಬೇಕು ಎಂದು ಜನರಿಗೆ ಪ್ರಧಾನಮಂತ್ರಿ ಕರೆ ನೀಡಿದ್ದಾರೆ. ಮತದಾನದ  ಮೂಲಕ ಜನರು ತಮ್ಮನ್ನು ದೇಶದ ಕನಸು ಹಾಗೂ ನಿರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಬೇಕು, ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ  ಸಿನಿಮಾ, ಕ್ರೀಡೆ, ಕೈಗಾರಿಕೆ, ಮಾಧ್ಯಮ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳು ಮುಂದಾಳತ್ವ ವಹಿಸಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದ್ದಾರೆ.