ಏಕದಿನ ಕ್ರಿಕೆಟ್: ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ೩೫ ರನ್‌ಗಳ ಗೆಲುವು; ಭಾರತ ವಿರುದ್ಧದ ಸರಣಿ ೩-೨ರಿಂದ ಕೈವಶ.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಿನ್ನೆ ನಡೆದ ಐದನೇ ಮತ್ತು ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ೩೫ ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ೩-೨ರಿಂದ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ ೨೭೩ ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ನಿಗದಿತ ೫೦ ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ೨೩೭ ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಆಸ್ಟ್ರೇಲಿಯಾದ ಅದಂ ಝಂಪಾ ೩ ವಿಕೆಟ್ ಪಡೆದರೆ, ಪ್ಯಾಟ್ ಕ್ಯುಮಿನ್ಸ್, ಜೆ ರಿಚರ್ಡ್ಸನ್ ಮತ್ತು ಮಾರ್ಕಸ್ ಸ್ಟೋಯ್‌ನಿಸ್ ತಲಾ ೨ ವಿಕೆಟ್ ಪಡೆದರು. ಭಾರತದ ಉಪ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ೮ ಸಾವಿರ ರನ್ ಪೂರೈಸಿದರು. ಅವರು ಈ ಪಂದ್ಯದಲ್ಲಿ ೫೬ ರನ್ ಗಳಿಸಿದರು. ಉಸ್ಮಾನ್ ಖವಾಜಾ ಅವರಿಗೆ ಪಂದ್ಯ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿ ನೀಡಲಾಯಿತು.