ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ಚೀನಾ ಅಡ್ಡಿ; ಭಾರತದಿಂದ ತೀವ್ರ ಅಸಮಾಧಾನ.

ಭಾರತದ ನಾಗರಿಕರ ವಿರುದ್ಧ ಹೇಯ ದಾಳಿಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಸಂಘಟನೆಗಳ ನಾಯಕರನ್ನು ನ್ಯಾಯಕ್ಕೆ ಒಳಪಡಿಸಲು ಭಾರತ ಎಲ್ಲ ಸಾಧ್ಯವಾದ ಮಾರ್ಗಗಳಲ್ಲಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಆದರೆ ವಿಶ್ವಸಂಸ್ಥೆಯಿಂದ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವಕ್ಕೆ ಚೀನಾ ತಾಂತ್ರಿಕ ಅಡಚಣೆ ಮುಂದಿಟ್ಟಿರುವುದಕ್ಕೆ ನವದೆಹಲಿ ಕಳೆದ ರಾತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರವರಿ ೧೪ರಂದು ನಡೆದ ಭಯೋತ್ಪಾದಕರ ದಾಳಿಯ ಪ್ರಮುಖ ಹೊಣೆ ಹೊತ್ತಿರುವ ಜೈಷ್-ಇ-ಮೊಹಮ್ಮದ್ ನಾಯಕ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಂತಾರಾಷ್ಟ್ರೀಯ ಸಮುದಾಯ ಘೋಷಿಸಲು ಹಿನ್ನಡೆಯಾಗಿದೆ ಎಂದು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಪ್ರಸ್ತಾವವನ್ನು ಬೆಂಬಲಿಸಿರುವುದಕ್ಕೆ ಭಾರತ ಕೃತಜ್ಞತೆಗಳನ್ನು ಸಲ್ಲಿಸಿದೆ. ಅಲ್ಲದೆ, ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳು ನಿರೀಕ್ಷೆಗೂ ಮೀರಿ ಪ್ರಸ್ತಾವವನ್ನು ಬೆಂಬಲಿಸಿವೆ ಎಂದು ಭಾರತ ಹೇಳಿದೆ.