ಬ್ರೆಕ್ಸಿಟ್ ಒಪ್ಪಂದದಿಂದ ಐರೋಪ್ಯ ಒಕ್ಕೂಟವನ್ನು ಬಿಡುವ ಬಗ್ಗೆ ಬ್ರಿಟನ್ ಮಂಡಿಸಿದ್ದ ನಿರ್ಣಯವನ್ನು ತಿರಸ್ಕರಿಸಿದ ಬ್ರಿಟಿಷ್ ಸಂಸತ್.


ಬ್ರೆಕ್ಸಿಟ್ ಒಪ್ಪಂದದಿಂದ ಐರೋಪ್ಯ ಒಕ್ಕೂಟವನ್ನು ಬಿಡುವ ಬಗ್ಗೆ ಬ್ರಿಟನ್ ಮಂಡಿಸಿದ್ದ ನಿರ್ಣಯವನ್ನು ಬ್ರಿಟಿಷ್ ಸಂಸದರು ಮತದಾನದ ಮೂಲಕ ತಿರಸ್ಕರಿಸಿದ್ದಾರೆ. ಇದರಿಂದಾಗಿ ಮಾರ್ಚ್ ೨೯ರ ಬ್ರೆಕ್ಸಿಟ್ ಗಡುವು ವಿಳಂಬವಾಗುವ ಸಾಧ್ಯತೆ ಇದೆ.

ಮಾರ್ಚ್ ೨೯ರೊಳಗೆ ಬ್ರೆಕ್ಸಿಟ್ ಒಪ್ಪಂದವಿಲ್ಲ ಎಂಬ ಸರ್ಕಾರದ ನಿರ್ಣಯವನ್ನು ಪ್ರಧಾನಿ ಥೆರೇಸಾ ಮೇ ಮಂಡಿಸಿದರು.

ಇದನ್ನು ಹೌಸ್ ಆಫ್ ಕಾಮನ್ಸ್ ೨೧ ಸಂಸದರ ಬೆಂಬಲದೊಂದಿಗೆ ಅಂಗೀಕರಿಸಿತು. ಆದರೆ ಇದನ್ನು ಮೇಲ್ಮನೆಯಲ್ಲಿ ಇಂದು ಮಂಡಿಸಲಾಗುವುದು; ಅದಕ್ಕೆ ಸದಸ್ಯರು ಒಪ್ಪುವ ಸಾಧ್ಯತೆಗಳು ಕಡಿಮೆ ಇವೆ.