ನೇಪಾಳದಲ್ಲಿ ನಡೆಯುತ್ತಿರುವ ೫ನೇ ದಕ್ಷಿಣ ಏಷ್ಯಾ ಮಹಿಳಾ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿಂದು ಭಾರತ ಬಾಂಗ್ಲಾದೇಶ ಮುಖಾಮುಖಿ

ನೇಪಾಳದಲ್ಲಿ ನಡೆಯುತ್ತಿರುವ ೫ನೇ ದಕ್ಷಿಣ ಏಷ್ಯಾ ಮಹಿಳಾ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿಂದು ಭಾರತ ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ  ಮಧ್ಯಾಹ್ನ ೨.೪೫ಕ್ಕೆ ಪಂದ್ಯ ಆರಂಭಗೊಳ್ಳಲಿದೆ.  ಇಂದು ಬೆಳಗ್ಗೆ ೧೦.೪೫ಕ್ಕೆ ಆರಂಭಗೊಳ್ಳುವ ಮತ್ತೊಂದು ಸೆಮಿಫೈನಲ್ಸ್‌ನಲ್ಲಿ ಆತಿಥೇಯ ನೇಪಾಳ ಮತ್ತು ಶ್ರೀಲಂಕಾ ಸೆಣಸಲಿವೆ. ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮಾಲ್ಡೀವ್ಸ್ ವಿರುದ್ಧ ೬-೦ ಅಂತರದ ಜಯ ಸಾಧಿಸಿ, ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿತ್ತು. ಈ ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ೫-೦ ಅಂತರದ ಭರ್ಜರಿ ಜಯ ಸಾಧಿಸಿತ್ತು.  ೨೦೧೦ರಲ್ಲಿ ಪಂದ್ಯಾವಳಿ ಆರಂಭಗೊಂಡಾಗಿನಿಂದ  ಭಾರತ ಎಲ್ಲಾ ಪಂದ್ಯಗಳಲ್ಲಿ ಸತತ ಜಯ ಸಾಧಿಸಿದ್ದು, ನಾಲ್ಕೂ ಆವೃತ್ತಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ೨೦೧೬ರಲ್ಲಿ ನಡೆದ  ಈ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಬಾಂಗ್ಲಾ ದೇಶವನ್ನು ೩-೧ ಗೋಲುಗಳಿಂದ ಮಣಿಸಿದ ಭಾರತ ಪ್ರಶಸ್ತಿ ಗೆದ್ದಿತ್ತು.