ಯುಎಇನ ಅಬುದಾಬಿಯಲ್ಲಿ ನಡೆಯುತ್ತಿರುವ ವಿಶೇಷ ವಿಶ್ವ ಒಲಿಂಪಿಕ್ಸ್ ಪಂದ್ಯಾವಳಿ ೨೦೧೯ ರಲ್ಲಿ ಭಾರತ ೩೫೦ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಪ್ರಸ್ತುತ ಪದಕಗಳ ಪಟ್ಟಿಯಲ್ಲಿ ೮೫ ಚಿನ್ನ, ೧೫೩ ರಜತ ಮತ್ತು ೧೨೪ ಕಂಚಿನ ಪದಗಳು ಸೇರಿ ಒಟ್ಟು ೩೬೨ ಪದಕಗಳನ್ನು ಭಾರತ ಗೆದ್ದುಕೊಂಡಿದೆ.
ಝಾಯೇದ್ ಸ್ಪೋರ್ಟ್ಸ್ ಸಿಟಿಯಲ್ಲಿ ಇಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಶ್ವದ ಪ್ರಖ್ಯಾತ ಸಂಗೀತಗಾರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಸಕ್ತ ವರ್ಷದ ಅತಿ ದೊಡ್ಡ ಕ್ರೀಡಾ ಕಾರ್ಯಕ್ರಮದಲ್ಲಿ ತರಬೇತುದಾರರು ಹಾಗು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.