ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ.

ದೃಸು ಲಸ್ಸಿಪೋರಾ ಪ್ರದೇಶದಲ್ಲಿ ಈ ಚಕಮಕಿ ನಡೆಯಿತು. ಹತ್ಯೆಗೀಡಾದ ಭಯೋತ್ಪಾದಕರು ಲಷ್ಕರ್ ಎ ತಯ್ಯಬಾ ಗುಂಪಿಗೆ ಸೇರಿದವರು. ಭದ್ರತಾ ಪಡೆಗಳು ಈ ಉಗ್ರರ ಅಡಗುದಾಣವನ್ನು ಧಂಸಗೊಳಿಸಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಡಿಜಿಪಿ ದಿಲ್ಬಾಗ್‌ಸಿಂಗ್ ಆಕಾಶವಾಣಿಗೆ ತಿಳಿಸಿದ್ದಾರೆ.