ದೆಹಲಿಯ ವಿಶೇಷ ಪೊಲೀಸ್ ತಂಡದಿಂದ ಶ್ರೀನಗರದಲ್ಲಿ ಜೈಷೇ ಮೊಹಮ್ಮದ್ ಗುಂಪಿನ ಪ್ರಮುಖ ಉಗ್ರ ಫಯಾಜ್ ಅಹಮ್ಮದ್ ಲೋನ್ ಬಂಧನ.

ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ಇಂದು ಜೈಷ್

ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಮುಖ ಉಗ್ರ ಫಯಾಜ್ ಅಹಮದ್ ಲೋನ್‌ನನ್ನು ಶ್ರೀನಗರದಲ್ಲಿ ಬಂಧಿಸಿದೆ.

ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿವಾಸಿಯಾದ ಈತನ ಬಂಧನಕ್ಕೆ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತೆಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಆತನ ವಿರುದ್ಧ ದೆಹಲಿ ಹೈ ಕೋರ್ಟ್ ನಲ್ಲಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿದೆಯೆಂದು ಮೂಲಗಳು ಹೇಳಿವೆ.