ಜರ್ಮನಿಯ ಕೊಲೊಗ್ನೆಯಲ್ಲಿ ವಿಶ್ವಕಪ್ ಬಾಕ್ಸಿಂಗ್; ಭಾರತಕ್ಕೆ ೧ ಚಿನ್ನ ಮತ್ತು ೨ ಬೆಳ್ಳಿ ಪದಕ, ೫೪ ಕೆಜಿ ವಿಭಾಗದಲ್ಲಿ ಮೀನಾಕುಮಾರಿಗೆ ಚಿನ್ನ.

ಜರ್ಮನಿಯ ಕೋಲೊಗ್ನೇಯಲ್ಲಿ ನಿನ್ನೆ ನಡೆದ ವಿಶ್ವಕಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತ ಒಂದು ಚಿನ್ನ ಮತ್ತು ೨ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ.

ಮೀನಾಕುಮಾರಿ ಮೇಸ್ನಂ ಮಹಿಳೆಯರ ೫೪ ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

೨೦೧೪ರ ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಹಾಗೂ ೩ ಬಾರಿಯ ರಾಷ್ಟ್ರೀಯ ಚಾಂಪಿಯನ್ ಮೀನಾ ಕುಮಾರಿ ಫೈನಲ್ ಮುಖಾಮುಖಿಯಲ್ಲಿ ಥೈಲೆಂಡ್‌ನ ಮಚಾಯಿ ಬ್ಯುನ್ಯಾನತ್ ಅವರನ್ನು ಪರಾಭವಗೊಳಿಸಿ ಚಿನ್ನದ ಹಾರ ಕೊರಳಿಗೆ ಹಾಕಿಕೊಂಡರು.

ಉಳಿದಂತೆ ೫೦ ಕೆಜಿ ವಿಭಾಗದಲ್ಲಿ ಸಾಕ್ಷಿ ಹಾಗೂ ೬೪ ಕೆಜಿ ವಿಭಾಗದಲ್ಲಿ ಪಿವಿಲಾವೋ ಬಾಸುಮತರಿ ಅವರು ಫೈನಲ್ ಹೋರಾಟದಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದರು. ಇದಕ್ಕೂ ಮುನ್ನ ಭಾರತದ ಪಿಂಕಿರಾಣಿ ೫೧ಕೆಜಿ ವಿಭಾಗದಲ್ಲಿ ಮತ್ತು ಪರ್ವೀನ್ ೬೦ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಭಾರತ ಈ ವಿಶ್ವಕಪ್ ಬಾಕ್ಸಿಂಗ್‌ನಲ್ಲಿ ೧ ಚಿನ್ನ ಮತ್ತು ೪ ಕಂಚಿನ ಪದಕಗಳನ್ನು ಗೆದ್ದುಕೊಂಡಂತಾಗಿದೆ.