ಬಹುಜನ ಸಮಾಜವಾದಿ ಪಕ್ಷದಿಂದ ೧೬ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಾರ್ಟಿ -ಬಿಎಸ್‌ಪಿ ೧೬ ಉಮೇದುವಾರರ  ಮತ್ತೊಂದು ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಮಾಜಿ ಲೋಕಸಭಾ ಸದಸ್ಯ ಭೀಷ್ಮ ಶಂಕರ್ ಸಂತಕಬೀರ್ ನಗರ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ರಂಗನಾಥ್ ಮಿಶ್ರ ಬಡೋದಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

ಪ್ರತಾಪ್‌ಗಢ್ ಕ್ಷೇತ್ರದ ಉಮೇದುವಾರರಾಗಿ ಅಶೋಕ್ ಕುಮಾರ್ ತ್ರಿಪಾಟಿ ಸ್ಪರ್ಧಿಸಿದ್ದು, ಧೊಮಾರಿಯ ಗಂಚ್ ಕ್ಷೇತ್ರದಿಂದ ಆಫ್ತಾಬ್ ಆಲಂ ಕಣಕ್ಕಿಳಿದಿದ್ದಾರೆ.